Header Ads
Header Ads
Breaking News

ಭಟ್ಕಳದ ಬೀದಿಬದಿ ವ್ಯಾಪಾರಸ್ಥರಿಗೆ ಪುರಸಭೆಯಿಂದ ಎಚ್ಚರಿಕೆ ರಸ್ತೆ ಬದಿ ವ್ಯಾಪಾರ ಮಾಡದಂತೆ ಸೂಚನೆ ಅಂಗಡಿಗಳನ್ನು ತೆರವುಗೊಳಿಸುವಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ

ಭಟ್ಕಳದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರಸ್ಥರು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಹಾಗು ಭಟ್ಕಳ ನಗರ ಪೊಲೀಸರ ಜಂಟಿ ಸಹಯೋಗದೊಂದಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ಸಂತೆ ಮಾರ್ಕೆಟಿನ ಬೀದಿಗಳಲ್ಲಿ ವ್ಯಾಪಾರವನ್ನು ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜನ ಸಂಖ್ಯೆ ಹಾಗು ವಾಹನದಟ್ಟಣಿ ಹೆಚ್ಚುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ, ಹಾಗು ಸಂತೆಯ ಸಮಯದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ಸಹ ಹೆಚ್ಚುತ್ತಿರುವುದು ಒಂದು ದೊಡ್ಡ ತಲೆನೋವಾಗಿ ಸಂಭವಿಸಿದೆ.

ಈ ಹಿನ್ನೇಲೆಯಲ್ಲಿ ಪ್ರತಿಯೊಂದು ಸಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ, ಪುರಸಭಾ ಅಧಿಕಾರಿಗಳು ಮೂರು ತಿಂಗಳ ಹಿಂದಿನಿಂದಲೂ ಬೀದಿ ಬದಿಯಲ್ಲಿರುವ ತಮ್ಮ ಅಂಗಡಿಗಳನ್ನು ತೆರವು ಗೋಳಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದರು, ಸಹ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ, ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಮುಂದುವರಿಸಿಕೊಂಡು ಬಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಆಯಿಶಾ ಖಾನಂ ವ್ಯಾಪಸ್ಥರು ಒಂದು ವಾರದ ಒಳಗಾಗಿ ಸಂತೆಯ ಸಮಯದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರವನ್ನು ನಡೆಸುವಂತಿಲ್ಲಾ. ಒಂದು ವೇಳೆ ವ್ಯಾಪಾರ ನಡೆಸಿದ್ದೆ,ಆದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುದು ಎಚ್ಚರಿಸಿದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply