Header Ads
Header Ads
Header Ads
Breaking News

ಭಟ್ಕಳದ ಬೈಲೂರಿನಲ್ಲಿ ಬೂತ್ ಮಟ್ಟದ ಸಮಾವೇಶ ನೋಟು ರದ್ದತಿಯಿಂದ ಉದ್ಯೋಗ ಕಳೆದುಕೊಂಡ ೩೦ ಕೋಟಿ ಜನ

ರಾಷ್ಟ್ರೀಕೃತ ರಿಸರ್ವ್ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ ಆರಂಭವಾಗಿದೆ ಸಮಾವೇಶದಲ್ಲಿ ಎಸ್.ಆರ್. ಪಾಟೀಲ್ ಹೇಳಿಕೆ.ಭಟ್ಕಳ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಬೂತ್ ಹಾಗೂ ಪಂಚಾಯತ್ ಮಟ್ಟದ ಘಟಕ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಮಾವೇಶವೂ ಭಟ್ಕಳದ ಬೈಲೂರಿನ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಮೋದಿ ಸರ್ಕಾರ ಮಾಡಿದ ನೋಟು ರದ್ದತಿಯಿಂದ ೩೦ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗೆಯೇ ಈ ನೋಟು ರದ್ದತಿಯಿಂದ ರಾಷ್ಟ್ರೀಕೃತ ಬ್ಯಾಂಕ್ ರಿಜರ್ವ ಬ್ಯಾಂಕ್‌ಗಳಲ್ಲಿ ಭ್ರಷ್ಟಾಚಾರ ಶುರುವಾಗಿದೆ. ಪ್ರತಿ ಬೂತ್‌ಗಳಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಸೋಲಿಸುತ್ತೇವೆ. ಇದಕ್ಕೆ ರಾಜ್ಯದಿಂದ ಹಿಡಿದು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ನಮಗೆ ವಿಶೇಷ ಶಕ್ತಿಯನ್ನು ನೀಡಬೇಕೆಂದು ಕರೆ ನೀಡಿದರು.
ಸಮಾವೇಶದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮ್ಯಾಥ್ಯುಸ್ ಠಾಗೋರ್, ಎಮ್.ಎಲ್.ಸಿ. ಎಸ್.ಎಲ್.ಘೋಟ್ನೆಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಪಕ್ಷದ ಮುಖಂಡರಾದ ಎಮ್.ಎಲ್.ಮೂರ್ತಿ, ಶ್ರೀಮತಿ ರಾಜನಂದಿನಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ಭಟ್ಕಳ ಶಾಸಕ ಮಂಕಾಳ ವೈದ್ಯ ಉಪಸ್ಥಿತರಿದ್ದರು.

Related posts

Leave a Reply