Header Ads
Header Ads
Header Ads
Breaking News

ಭಟ್ಕಳದ ಬೈಲೂರಿನಲ್ಲಿ ಭಟ್ಕಳ ವಿಧಾನ ಸಭಾ ಕ್ಷೇತ್ರದ ಬೂತ್ ಹಾಗೂ ಪಂಚಾಯತ್ ಮಟ್ಟದ ಘಟಕ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಮಾವೇಶ

ಭಟ್ಕಳ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಬೂತ್ ಹಾಗೂ ಪಂಚಾಯತ್ ಮಟ್ಟದ ಘಟಕ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಮಾವೇಶವೂ ಭಟ್ಕಳದ ಬೈಲೂರಿನ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಮಂಗಳವಾರದಂದು ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದು, “ಕೇಂದ್ರದ ಮೋದಿ ಸರ್ಕಾರ ಮಾಡಿದ ನೋಟು ರದ್ದತಿಯಿಂದ 30 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗೆಯೇ ಈ ನೋಟು ರದ್ದತಿಯಿಂದ ರಾಷ್ಟ್ರೀಕೃತ ಬ್ಯಾಂಕ್ ರಿಜರ್ವ ಬ್ಯಾಂಕ್‌ಗಳಲ್ಲಿ ಭ್ರಷ್ಟಾಚಾರ ಶುರುವಾಗಿದೆ. ಜನರು ತಮ್ಮ ಹಣ ತೆಗೆಯುವಾಗ ಅನೇಕ ಸಾವುಗಳು ಸಂಭವಿಸಿದವು. ಮೋದಿ ಬೆಟ್ಟ ಅಗೆದು ಇಲಿಹಿಡಿಯುವ ಕೆಲಸ ಮಾಡಿದ್ದಾರೆ. ದೇಶದ ಅತೀ ಉತ್ತಮ ಸರ್ಕಾರ ಎಂದರೆ ಕರ್ನಾಟಕ ಸಿದ್ದರಾಮಯ್ಯ ಸರ್ಕಾರವಾಗಿದೆ. ಅತೀ ಭ್ರಷ್ಟ ಸರಕಾರ ಬಿಜೆಪಿ ಸರಕಾರವಾಗಿದೆ. ಪ್ರತಿ ಬೂತ್‌ಗಳಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಸೋಲಿಸುತ್ತೇವೆ. ಇದಕ್ಕೆ ರಾಜ್ಯದಿಂದ ಹಿಡಿದು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ನಮಗೆ ವಿಶೇಷ ಶಕ್ತಿಯನ್ನು ನೀಡಬೇಕೆಂದು ಕರೆ ನೀಡಿದರು.

ಸಮಾವೇಶಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, “ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾಂತಿ ಸುವ್ಯವಸ್ಥೆ ಬೆಳೆಸುತ್ತದೆ. ಯಾಕೆಂದರೆ ನಾವು ಎಲ್ಲಾ ಜಾತಿ ಧರ್ಮವನ್ನು ಒಂದೇ ಎಂದು ಆಡಳಿತ ನಡೆಸುತ್ತೇವೆ. ಒಂದು ಸಂದರ್ಬದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಯಾವುದು ಇರಲಿಲ್ಲವಾಗಿತ್ತು. ಆ ಸಂಧರ್ಭದಲ್ಲಿ ಪಕ್ಷ ಅಷ್ಟಾಗಿ ಸಂಘಟನೆಯಾಗಿಲ್ಲವಾಗಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷ ಮಾಸ್ ಬೇಸ್ ಪಾರ್ಟಿಯಾಗಿದ್ದು ಪಕ್ಷದಲ್ಲಿನ ಯುವ ಕಾರ್ಯಕರ್ತರ ಹುರುಪು ಅವರ ಉದ್ದೇಶವೇ ಇದಕ್ಕೆಲ್ಲ ಕಾರಣವಾಗಿದೆ. ಇನ್ನು ಭಟ್ಕಳ ಕ್ಷೇತ್ರ ಶಾಸಕ ಮಂಕಾಳ ವೈದ್ಯರು ಜನಪರ ನಾಯಕರಾಗಿದ್ದು, ತಮ್ಮ ಕ್ಷೇತ್ರದ ಯಾವುದಾದರು ಕೆಲಸ ಮಾಡಿಕೊಡುವಲ್ಲಿ ತಡವಾದಲ್ಲಿ ಮೂಖ ಕೆಂಪು ಮಾಡಿ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಜಿಲ್ಲೆಯಲ್ಲಿ ಹಿಂದಿನಿಂದಲೂ ನೆನೆಕುದಿ ಬಿದ್ದಂತಹ ಅನೇಕ ಸೇತುವೆಗಳ ಕಾಮಗಾರಿಗಳನ್ನು ಮಂಕಾಳ ವೈದ್ಯರು ತಮ್ಮ ಅವಧಿಯಲ್ಲಿ ಮುಗಿಸಿದ್ದಾರೆ. ಇದು ಅವರ ಕಾರ್ಯಕ್ಷಮತೆಯನ್ನು ತೋರುತ್ತದೆ. ಮುಂದಿನ ಚುನಾವಣೆಗೆ ಪ್ರತಿ ಬೂತನಲ್ಲೂ ನಿಮ್ಮೆಲ್ಲರ ಸಹಕಾರದೊಂದಿಗೆ ನಾವು ಬಹುಮತದಿಂದ ಆರಿಸಿಬರುವುದರಲ್ಲಿ ಯಾವುದೇ ಸಂಶಯವಿಲ್ಲ.” ಎಂದರು.


ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಬೈಕ್ ರ್‍ಯಾಲಿಯ ಮೂಖಾಂತರ ತಾಲುಕಿನ ಬೈಲುರಿನ ಗಡಿ ಭಾಗದಿಂದ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದವರೆಗೆ ಕರೆತರಲಾಯಿತು. ಸಮಾವೇಶದಲ್ಲಿ ಭಟ್ಕಳ ಹಾಗೂ ಮಂಕಿ ಭಾಗದ ಎಲ್ಲಾ ಕಾರ್ಯಕರ್ತರಿಗೆ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಸಮಾವೇಶದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮ್ಯಾಥ್ಯುಸ್ ಠಾಗೋರ್, ಎಮ್.ಎಲ್.ಸಿ. ಎಸ್.ಎಲ್.ಘೋಟ್ನೆಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಪಕ್ಷದ ಮುಖಂಡರಾದ ಎಮ್.ಎಲ್.ಮೂರ್ತಿ, ಶ್ರೀಮತಿ ರಾಜನಂದಿನಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ಭಟ್ಕಳ ಶಾಸಕ ಮಂಕಾಳ ವೈದ್ಯ, ಭಟ್ಕಳ ತಂಝೀ ಅಧ್ಯಕ್ಷ ಮೂಜಾಮಿಲ್ ಖಾಜೀಯಾ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಸೇರಿದಂತೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply