Header Ads
Header Ads
Breaking News

ಭಟ್ಕಳದ ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ, ಉನ್ನತ ಮಟ್ಟದ ತನಿಖೆಯ ಆದೇಶಕ್ಕಾಗಿ ಮನವಿ


ಭಟ್ಕಳ ತಾಲೂಕಿನ ಮುರ್ಡೇಶ್ವರದ ಹಿರೇದೋಮಿಯ ಯುವತಿ ಯಮುನಾ ನಾಯ್ಕ ಮೇಲಾದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿ ಅರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕೆಂದು ಆಗ್ರಹಿಸಿ ಮಂಗಳವಾರದಂದು ಭಟ್ಕಳ ತಾಲೂಕು ನಾಮಧಾರಿ ಒಕ್ಕೂಟದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.ಅತ್ಯಾಚಾರ ಮಾಡಿ ಅಮಾನುಷವಾಗಿ ಕೊಲೆಗೈದ ಆರೋಪದಡಿ ವೆಂಕಟೇಶ ಹರಿಕಂತ್ರ ಎನ್ನುವವರ ಮೇಲೆ ಪೊಲೀಸ್ ಕೇಸು ದಾಖಲಿಸಲಾಗಿತ್ತು. ಆದರೆ ನಿರಪರಾಧಿಯಾಗಿದ್ದ ವೆಂಕಟೇಶ ಹರಿಕಂತ್ರ ಅನಾವಶ್ಯಕವಾಗಿ ಶಿಕ್ಷೆ ಅನುಭವಿಸಿ ನಿರ್ದೋಷಿ ಎಂದು ನ್ಯಾಯಾಲಯ ಆತನನ್ನು ಬಿಡುಗಡೆಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೊಲೆಗೆ ಸಂಬಂಧಿಸಿದ ಸಾಕಷ್ಟು ಪುರಾವೆ ಇದ್ದಾಗಲೂ ನೈಜ ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿರುವ ಪೋಲೀಸ್ ಇಲಾಖೆಯ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ
ರಾಘವೇಂದ್ರ ಮಲ್ಯ

Related posts

Leave a Reply