Header Ads
Header Ads
Breaking News

ಭಟ್ಕಳದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಆರ್.ವಿ. ದೇಶಪಾಂಡೆ ಉದ್ಘಾಟನೆ

ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮೀನು ಮಾರುಕಟ್ಟೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ್ ವಿದ್ಯಾರ್ಥಿ ನಿಲಯ ಕಟ್ಟಡದ ಶಂಕುಸ್ಥಾಪನಾ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಅಭಿವೃದ್ಧಿಯಾಗುವಾಗ ಎಲ್ಲರು ಸಹಕಾರದಿಂದ ಆಗಬೇಕು, ಅಭಿವೃದ್ಧಿ ಪಕ್ಷಾತೀತವಾಗಿರಬೇಕು ರಾಜಕಾರಣ ಮತ್ತು ಚುನಾವಣೇ ಇದು ಕೇವಲ ಚುಣಾವಣೆಗೆ ಮಾತ್ರ ಸೀಮಿತವಾಗಿರಬೇಕು. ಜನರ ಕಷ್ಟಕ್ಕೆ ಪರಿಹಾರ ಕಂಡುಹಿಡಿಯುವಾಗ ಹಾಗೂ ನ್ಯಾಯ ನೀಡುವಾಗ ಪಕ್ಷಗಳು ಹಾಗೂ ರಾಜಕಾಣಗಳು ಅಡ್ಡಬಾರದು ಎಂದರು. ಹಾಗೇಯ ನಮ್ಮ ದೇಶದಲ್ಲಿ ಅನೇಕ ಸಮಸ್ಯೆಗಳು ಇದ್ದು ಅದನ್ನು ನಿವಾರಿಸಲು ಒಬ್ಬರಿಂದ ಸಾದ್ಯವಿಲ್ಲ ಎಲ್ಲರು ಸಹಕಾರ ಹಾಗೂ ಬೆಂಬಲದಿಂದ ಮಾತ್ರ ಸಾದ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಶಾಸಕ ಸುನಿಲ್ ನಾಯ್ಕರವರು ಮಾತನಾಡಿ ಕೇವಲ ಕಾರ್ಯಕ್ರಮ ಮಾಡಿ ಮೀನು ಮಾರುಕಟ್ಟಿ ಆರಂಭ ಮಾಡಿದ್ದಿರಿ, ಇಷ್ಟಕ್ಕೆ ನಿಮ್ಮ ಕೇಲಸ ಮುಗಿದಿಲ್ಲ ಇನ್ನು ಹೆಚ್ಚಿನ ಜವಬ್ದಾರಿ ಇದೆ. ಅದಷ್ಟು ಬೇಗ ಟೆಂಡರ್ ಪ್ರಕ್ರಿಯೇ ಪ್ರಾರಂಭ ಮಾಡಿ ರಸ್ತೆಯ ಬದಿಯಲ್ಲಿ ಮಾರಾಟ ಮಾಡುತ್ತಿರುವ ಮಹಿಳೆಯನ್ನು ಕರೆದುಕೊಂಡು ಬಂದು ಮೀನು ಮಾರ ಕಟ್ಟೆಗೆ ತಲುಪಿಸಿಬೇಕೆಂದು ಪುರಬೆಯ ಅಧಿಕಾರಿಗಳಿಗೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಸಾದಿಕ್ ಮಟ್ಟಾ, ಸಹಾಯಕ ಆಯುಕ್ತರಾದ ಸಾಜಿದ್ ಅಹ್ಮದ ಮುಲ್ಲಾ, ನಿಕಟ ಪೂರ್ವ ಕರಾವಳಿ ಅಭಿವೃದ್ದಿ ಪ್ರಾದಿಕಾರ ಅಧ್ಯಕ್ಷರಾದ ನಿವೇದಿತಾ ಆಳ್ವಾ, ತಾಲೂಕ ಪಂಚಾಯತ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಮಾಜಿ ಶಾಸಕರಾದ ಮಂಕಾಳ ಎಸ್. ವೈದ್ಯ, ತಾಲೂಕ ಪಂಚಾಯತ ಉಪಾಧ್ಯಕ್ಷರಾದ ರಾಧಾ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply