Header Ads
Header Ads
Header Ads
Breaking News

ಭಟ್ಕಳದ ಶಿರಾಲಿಯ ಕನ್ನಡ ಮಾಧ್ಯಮ ಶಾಲೆ ಆಧುನಿಕತೆಯತ್ತ ಬೆಂಗಳೂರಿನ ಬ್ರಿಕ್‌ವರ್ಕ್ ಫೌಂಡೇಶನ್‌ನಿಂದ ದತ್ತು ಸ್ವೀಕಾರ ಅತ್ಯಾಧುನಿಕ ರೀತಿಯಲ್ಲಿ ಶಿಕ್ಷಣ ನೀಡುವ ಯೋಜನೆ

ಅತ್ಯಾಧುನಿಕ ರೀತಿಯಲ್ಲಿ ಶಿಕ್ಷಣ ನೀಡುವ ಸಲುವಾಗಿ ಭಟ್ಕಳದ ಸರಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ಬೆಂಗಳೂರಿನ ಬ್ರಿಕ್ ವರ್ಕ ಫೌಂಡೇಶನ್‌ನವರು ದತ್ತು ಪಡೆದುಕೊಂಡರು.ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಸ್ಮಾರ್ಟ್ ಕ್ಲಾಸ್ ಇದೇ ವೇಳೆ ಉದ್ಘಾಟನೆಗೊಂಡಿತು. ಈ ವೇಳೆ ಬ್ರಿಕ್ ವರ್ಕ ಫೌಂಡೇಶನ್ ಅಧ್ಯಕ್ಷ ಸಂಗೀತ ಕುಲಕರ್ಣಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಎಲ್ಲಾ ತರದ ವ್ಯವಸ್ಥೆಗಳಿದ್ದರೂ, ಮಕ್ಕಳು ಖಾಸಗಿ ಶಾಲೆಗಳ ಮೋರೆಹೊಗುತ್ತಿದ್ದಾರೆ, ಆದ್ದರಿಂದ ನಮ್ಮ ಸಂಸ್ಥೆಯ ಮೂಖಾಂತರ ಈ ಶಾಲೆಯನ್ನು ದತ್ತು ಪಡೆದು ಆಂಗ್ಲಮಾಧ್ಯಮದ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಿ ಶಾಲೆಯಲ್ಲಿ ಕಂಪ್ಯೂಟರ್ ತರಗತಿಯನ್ನು ಪ್ರಾರಂಭಿಸಿದ್ದೇವೆ.

ನಮ್ಮ ಉದ್ದೇಶ ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಮುಚ್ಚುತ್ತಿರುವ ಸರಕಾರಿ ಶಾಲೆಗಳನ್ನು ಆಧುನಿಕತೆಯತ್ತ ಕೊಂಡೊಯ್ಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಶಾಲೆಗಳನ್ನು ದತ್ತು ಪಡೆದು ಅಬಿವೃದ್ದಿಪಡಿಸುವ ಉದ್ದೇಶ ಇದೆ ಎಂದು ಹೇಳಿದರು

Related posts

Leave a Reply