Header Ads
Header Ads
Header Ads
Breaking News

ಭಟ್ಕಳದ ಸಾರ್ವಜನಿಕರ ನಿತ್ಯ ರೋದನೆಯಾದ ಕಸದ ಸಮಸ್ಯೆ

ಭಟ್ಕಳ ತಾಲೂಕಿನ ನ್ಯಾಷನ್ ಕಾಲನಿಯ ಸಾರ್ವಜನಿಕರು ಕಸದ ಸಮಸ್ಯೆಗಳಿಂದ ದಿನ ನಿತ್ಯ ಭಯಾನಕ ರೋಗಗಳ ಜೋತೆ ಬದುಕು ನಡೆಸುವಂತಾಗಿದೆ
ಭಟ್ಕಳ ತಾಲೂಕಿನ ಮುಡೇಶ್ವರದ ನ್ಯಾಷನ್ ಕಾಲನಿ ಸಮೀಪ ಕಸದ ಸಮಸ್ಯೆ ತೀವ್ರಗೊಂಡಿದೆ. ಕಸದ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಿ ಕಣ್ಣಿದ್ದು ಕುರುಡರಾಗಿದ್ದಾರೆ. ದಿನದಿಂದ ದಿನಕ್ಕೆ ಸಾರ್ವಜನಿಕರ ಸಮಸ್ಯೆ ಹೆಮ್ಮರವಾಗಿ ಬೆಳೆಯುತ್ತಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ಭಟ್ಕಳ ತಾಲೂಕಿನ ಜನರ ಈ ಕಸದ ಸಮಸ್ಯೆ ಮಾಮುಲು ಆಗಿ ಬಿಟ್ಟಿದೆ. ದಿನ ಬೆಳಗಾದರೆ ಯಾವಾಗಲು ತಾಲೂಕಿನ ಒಂದಲ್ಲೊಂದು ಭಾಗದಲ್ಲಿ ಈ ಕಸದ ಸಮಸ್ಯೆ ಯಾವಾಗಲು ತಲೆಯೆತ್ತುತ್ತಲೇ ಇರುತ್ತದೆ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇಲ್ಲಿನ ಸಮಸ್ಯೆಯನ್ನು ಗಮನಹರಿಸಿಲ್ಲ. ಈ ಕಸದ ಸಮಸ್ಯೆಗಳಿದ್ದ ಭಟ್ಕಳ ತಾಲೂಕಿನ ಮುರ್ಡೆಶ್ವರದ ನ್ಯಾಷನಲ್ ಕಾಲೋನಿಯ ನಿವಾಸಿಗಳು ಖಾಯಿಲೆಗಳಿಗೆ ಬಲಿಯಾಗಿ ದಿನನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿಯ ಸ್ಥಳೀಯ ಪ್ರತಿಕ್ರಿಯೆ ನೀಡಿ ನಮ್ಮ ಭಾಗದಲ್ಲಿ ಕಸವನ್ನು ಹಾಕಲು ಯಾವುದೇ ವ್ಯವಸ್ಥೆಗಳಿಲ್ಲ. ಈ ಬಗ್ಗೆ ಮಂಡಲ ಪಂಚಾಯತ್‌ಗೆ ತಿಳಿಸಿದರು ಕೂಡಾ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಹೇಳಿದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply