Header Ads
Header Ads
Breaking News

ಭಟ್ಕಳದ ಹೆಂಜಿಲೆ ಗ್ರಾಮಕ್ಕೆ ನೂತನ ಸೇತುವೆ ಶಾಸಕ ಮಂಕಾಳ ವೈದ್ಯರಿಂದ ಸೇತುವೆ ಉದ್ಘಾಟನೆ ಹೆಂಜಿಲೆ ಸೇತುವೆಗೆ ಡಾ.ಯು.ಚಿತ್ತರಂಜನ್ ಎಂದು ಮರುನಾಮಕರಣ

ಭಟ್ಕಳ ತಾಲ್ಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಂಜಿಲೆ ಗ್ರಾಮವೊಂದು ಕುಗ್ರಾಮವಾಗಿದ್ದು ಪೇಟೆಯ ಸಂಪರ್ಕದಿಂದ ದೂರವೆ ಉಳಿದಿತ್ತು. ಇದೀಗ ಗ್ರಾಮದ ಸಂಪರ್ಕಕ್ಕಾಗಿ ನಿರ್ಮಾಣಗೊಂಡ ಸೇತುವೆಯನ್ನು ಶಾಸಕ ಮಂಕಾಳ ವೈದ್ಯ ಸೇತುವೆಗೆ ಮಾರುನಾಮಕರಣ ಮಾಡಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಂಜಿಲಿನ ಈ ಭಾಗದಲ್ಲಿ ಸೇತುವೆ ನಿರ್ಮಿಸಬೇಕೆಂಬುದು ಅಂದಿನ ಶಾಸಕರಾಗಿದ್ದ ದಿವಂಗತ ಡಾ.ಚಿತ್ತರಂಜನ್ ಅವರ ಕನಸಾಗಿತ್ತು. ಅವರ ಕನಸನ್ನು 22 ವರ್ಷಗಳ ನಂತರ ನಾನು ಈಡೇರಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದ ಶಾಸಕ ಮಂಕಾಳ ವೈದ್ಯರು ಮಾಜಿ ಶಾಸಕ ಡಾ.ಚಿತ್ತರಂಜನ್ ಅವರ ಹೆಸರು ಚಿರಸ್ಥಾಯಿಯಾಗಿರಬೇಕು ಎನ್ನುವ ಕಾರಣದಿಂದ ಸೇತುವೆಗೆ ಇವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು.ಈ ಸೇತುವೆ ಸುಮಾರು ೪ ಕೋಟಿ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆಯು ಈ ಭಾಗದ ಜನರ ದಶಕಗಳ ಕನಸನ್ನು ಈಡೇರಿಸಿದೆ. ಕೇವಲ 45 ಕುಟುಂಬ 200 ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮ ಇಂದು ಸೇತುವೆ ಭಾಗ್ಯ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ

ವರದಿ: ರಾಘವೇಂದ್ರ ಮಲ್ಯ ಭಟ್ಕಳ