Header Ads
Header Ads
Breaking News

ಭಟ್ಕಳದ ಹೆದ್ದಾರಿ ಪಕ್ಕದ ಗುಜರಿ ಅಂಗಡಿಯಿಂದ ಸಮಸ್ಯೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾದ ತಾಲೂಕಾಡಳಿತ ಪುರಸಭೆ ಹಾಗೂ ಪೊಲೀಸರ ದಿವಯ ನಿರ್ಲಕ್ಷ್ಯ

ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲಿ ಗುಜರಿ ವ್ಯಾಪಾರಿಗಳು ತಮ್ಮ ಗುಜರಿ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿನ ಪುರವರ್ಗ ಗಣೇಶ ನಗರ, ಮಣ್ಕುಳಿ ಪೆಟ್ರೋಲ್ ಬಂಕ್ ಎದುರುಗಡೆ, ಕೋಟೇಶ್ವರ ನಗರದ ದಕ್ಷಿಣ ಕಾಳಿಕಾ ದೇವಾಲಯದ ಬಳಿ ಹಾಗೂ ತೆಂಗಿನಗುಡಿ ಕ್ರಾಸ್‌ನ ನರ್ಸರಿ ಪಕ್ಕದಲ್ಲಿ ಕಾನೂನು ಬಾಹಿರವಾಗಿ ಗುಜರಿ ಅಂಗಡಿ ವ್ಯಾಪಾರಿಗಳು ಗುಜರಿ ವಸ್ತು ಇಟ್ಟು ಇದರ ಹಾವಳಿಯಿಂದ ಸ್ಥಳಿಯರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾದಂತಾಗಿದೆ.
ಗುಜರಿ ಅಂಗಡಿಯಿಂದ ಅಕ್ಕಪಕ್ಕದ ಸ್ಥಳಿಯ ನಿವಾಸಿಗಳಿಗೂ ಆರೋಗ್ಯದ ಮೇಲೆಯೂ ಪರಿಣಾಮ ಬಿದ್ದಿದ್ದು, ಕೊಳೆತ ಗುಜರಿ ವಸ್ತುವಿನಿಂದ ಸ್ಥಳಿಯರಿಗೆ ಕಿರಿಕಿರಿಯುಂಟಾಗುತ್ತಿದೆ. ಕಾನೂನೂ ಬಾಹಿರವಾಗಿ ಗುಜರಿ ಅಂಗಡಿಯನ್ನು ನಡೆಸುತ್ತಿದ್ದರೂ ಈ ಬಗ್ಗೆ ಇಲ್ಲಿನ ಪುರಸಭೆ, ತಾಲೂಕಾಢಳಿತ ಹಾಗೂ ಮುಖ್ಯವಾಗಿ ಪೊಲೀಸ್ ಇಲಾಖೆ ಅವರ ವ್ಯಾಪಾರಕ್ಕೆ ತಡೆಯೊಡ್ಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೆದ್ದಾರಿ ಅಂದ ಮೇಲೆ ಪ್ರತಿನಿತ್ಯ ಸಾವಿರಾರು ಎಲ್ಲಾ ರೀತಿಯ ವಾಹನಗಳು ಸಂಚರಿಸುತ್ತವೆ.ಕಾನೂನು ಬಾಹಿರವಾಗಿ ನಡೆಸಿಕೊಂಡು ಹೋಗುತ್ತಿರುವ ಇಲ್ಲಿನ ಎಲ್ಲಾ ಗುಜರಿ ಅಂಗಡಿಯ ಮಾಲೀಕರ ಬಳಿ ಪ್ರತಿ ತಿಂಗಳು ತೆರಳಿ ಹಣ ವಸೂಲಿ ಮಾಡಿ ಅವರ ವ್ಯಾಪಾರಕ್ಕೆ ಶ್ರೀರಕ್ಷೆಯಾಗಿದ್ದಾರೆಂಬ ಆರೋಪ ಸಾರ್ವಜನಿಕರದ್ದಾಗಿದೆ.

ವರದಿ: ರಾಘವೇಂದ್ರ ಮಲ್ಯ – ಭಟ್ಕಳ.