Header Ads
Header Ads
Breaking News

ಭಟ್ಕಳ: ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ “ಗ್ಯಾಸ್ ಕಿಟ್” ವಿತರಣೆ

ಭಟ್ಕಳ ತಾಲೂಕಿನ ರಂಜನ್ ಇಂಡೇನ್ ಎಜೆನ್ಸಿಯ ವತಿಯಿಂದ ತಾಲೂಕಿನ ಎಂಟು ಗ್ರಾಮಗಳಲ್ಲಿನ ವಾರ್ಡ್‌ಗಳನ್ನು ಹೊಗೆಮುಕ್ತವನ್ನಾಗಿಸಿದ ಕಾರ್ಯವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಶ್ಲಾಘಿಸಿದರು. ಭಟ್ಕಳದ ಬೆಳಕೆ ಪ್ರೌಢಶಾಲೆಯ ಸಭಾಂಗಣದಲ್ಲಿ ಎರ್ಪಡಿಸಲಾಗಿದ್ದ ಪ್ರಧಾನ ಮಂತ್ರಿ ಎಲ್.ಪಿ.ಜಿ. ಪಂಚಾಯತ್‌ನ್ನಾಗಿ ಬೆಳಕೆ ಗ್ರಾಮ ಪಂಚಾಯತನ್ನು ಘೋಷಣೆ ಮಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಅವರು, ಉಜ್ವಲ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಿದರು.ಬಳಿಕ ಮಾತನಾಡಿದ ಸಚಿವರು ಕೇಂದ್ರ ಸರಕಾರ ಗ್ರಾಮೀಣ ಭಾಗದ8 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲು ಯೋಜನೆ ಹಾಕಿಕೊಂಡಿದೆ.

ಗ್ರಾಮೀಣ ಭಾಗದ ಜನರ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಪ್ರಧಾನಿಯವರು ಆಯಶ್ಮಾನ್ ಭಾರತ ಎನ್ನುವ ಆರೋಗ್ಯ ಯೋಜನೆಯನ್ನು ಇದೇ 25ರಿಂದ ತರುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಆನಂತರ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಅವರು, ಜನರು ಯಾವುದೇ ಸೌಲಭ್ಯ ದೊರೆಯದಿದ್ದರೂ ಸಹ ನೇರವಾಗಿ ತಮ್ಮ ಕಚೇರಿಯನ್ನು ಸಂಪರ್ಕಿಸಬಹುದು. ಕೇಂದ್ರ ಸರಕಾರ ಹತ್ತು ಹಲವು ಯೋಜನೆಯೊಂದಿಗೆ ಜನಪರವಾದ ಕಾರ್ಯ ಮಾಡುತ್ತಿದ್ದು ಎಲ್ಲರೂ ಅದರ ಸದುಪಯೋಗ ಪಡೆಯಿರಿ ಎಂದು ಕರೆ ನೀಡಿರು. ವೇದಿಕೆಯಲ್ಲಿ ಬಿ.ಜೆ.ಪಿ. ತಾಲೂಕ ಅಧ್ಯಕ್ಷ ರಾಜೇಶ ನಾಯ್ಕ, ಮಾಜಿ ಜಿಲ್ಲಾಧ್ಯಕ್ಷ ಎಂ. ಜಿ. ನಾಯ್ಕ, ಪ್ರಮುಖರಾದ ಉಮೇಶ ನಾಯ್ಕ, ಬೆಳಕೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಚಂದ್ರಕಾಂತ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply