Header Ads
Header Ads
Breaking News

ಭಟ್ಕಳ ಉಪನೊಂದಾಣಿ ಕಚೇರಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಆಸ್ತಿ, ಭೂಮಿ, ಮದುವೆ ನೊಂದಾಣಿಯ ಕಾರ್ಯ ಸ್ಥಗಿತ ದೂರದೂರಿನ ಜನತೆಗೆ ಎದುರಾದ ಸಮಸ್ಯೆ

 

ಆಸ್ತಿ, ಭೂಮಿ, ಡೀಡ್, ಮದುವೆ, ಮತ್ತಿತರ ನೋಂದಣೆ ಕಾರ್ಯನಿರ್ವಹಿಸುವ ಭಟ್ಕಳ ಉಪನೋಂದಣಿ ಕಚೇರಿ ಕಳೆದ ಒಂದು ವಾರದಿಂದ ನೆಟ್‌ವರ್ಕ ಸಮಸ್ಯೆ ಹೇಳಿಕೊಂಡು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಇದು ದೂರದ ಊರಿನಿಂದ ನೋಂದಣಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಆಂಕರ್: ಭಟ್ಕಳ ಉಪನೋಂದಣಿ ಕಚೇರಿ ಮುಂಭಾಗದಲ್ಲಿ ದೊಡ್ಡದೊಂದು ಸೂಚನಾ ಫಲಕವನ್ನು ಹಾಕಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹಳ್ಳಿ ಪ್ರದೇಶದ ಜನರು ಸುಮಾರು ೩೦-೪೦ ಕಿ.ಮೀ. ದೂರದಿಂದ ತಮ್ಮ ಭೂಮಿ, ವಿವಾಹ ನೊಂದಣೆ ಮತ್ತಿತರ ಕಾರ್ಯಗಳಿಗೆ ಭಟ್ಕಳಕ್ಕೆ ಬಂದು ಉಪನೋಂದಣೆ ಕಚೇರಿಗೆ ಸುತ್ತು ಹೊಡೆದು ಹೋಗುತ್ತಿರುವುದು ಮಾಮೂಲಿಯಾಗಿದೆ. ಅಲ್ಲದೇ ಬಂದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿದೆ. ಈ ಕುರಿತಂತೆ ಉಪನೊಂದಾವಣಾಧಿಕಾರಿ ರಾಜೇಶ್ವರಿ ಹೆಗಡೆ ಯವರನ್ನು ವಿಚಾರಿಸಿದಾಗ ಕಳೆದ ಒಂದು ವಾರದಿಂದ ಇಂಟರ್ ನೆಟ್ ಸಮಸ್ಯೆ ಉಂಟಾಗಿದ್ದು ಸರ್ವರ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಇಲ್ಲಿನ ಯಾವುದೇ ಕಾರ್ಯಗಳು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ದೂರನ್ನು ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷವೂ ಸಹ ಇಂತಹದ್ದೇ ಸಮಸ್ಯೆ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳು ಕಚೇರಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದುದಾಗಿದೆ. ಒಟ್ಟಾರೆ ಪದೇ ಪದೇ ಭಟ್ಕಳ ಉಪನೋಂದಣಿ ಕಛೇರಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುವಂತಹ ಕೆಲಸವಾಗುತ್ತಿದ್ದು, ಈ ಬಗ್ಗೆ ಅಧಕಾರಿಗಳು ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.

ರಾಘವೇಂದ್ರ ಮಲ್ಯ. ಭಟ್ಕಳ.

Related posts

Leave a Reply