Header Ads
Header Ads
Breaking News

ಭಟ್ಕಳ ಜನತೆಗೆ ತಲೆನೋವಾಗಿ ಪರಿಣಮಿಸಿದ ಸಿಗಡಿ ಸಾಗಾಣಿಕಾ ಕೇಂದ್ರ ಪಲವತ್ತತೆ ಕಳೆದುಕೊಂಡ ನೂರಾರು ಎಕರೆ ಕೃಷಿ ಭೂಮಿ ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ, ಕೃಷಿಕರ ಆಕ್ರೋಶ

ಭಟ್ಕಳ ತಾಲೂಕಿನ ಶಿರಾಲಿ ಗ್ರಾ.ಪಂ ವ್ಯಾಪ್ತಿಯ ಬಂಡಿಮನೆ ಮಜಿರೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಸಿಗಡಿ ಸಾಕಣಿಕ ಕೇಂದ್ರ ನಡೆಸುತ್ತಿದ್ದು, ನೂರಾರು ಎಕ್ಕರೆ ಕೃಷಿ ಭೂಮಿ ತನ್ನ ಪಲವತ್ತತೆ ಕಳೆದುಕೊಂಡಿದೆ. ಕೃಷಿ ಜಮೀನುಗಳು ತನ್ನ ಅಸ್ಥಿತ್ವ ಕಳೆದು ಕೊಳ್ಳುತ್ತಿದ್ದರು ಸಂಬಂದಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಭಟ್ಕಳ ತಾಲೂಕಿನ ಈ ಪ್ರದೇಶವು ಸಿಗಡಿ ಕೇಂದ್ರದಿಂದ ದಿನಕಳೆದಂತೆ ತನ್ನ ಪಲವತ್ತತೆ ಕಳೆದುಕೊಳ್ಳುತ್ತಿದ್ದರೆ, ಈ ಪ್ರದೇಶದಲ್ಲಿ ಇನ್ನು 7 ರಿಂದ 8ಸಿಗಡಿ ಪ್ಲಾಂಟ್ಗಳು ತಲೆಯೆತ್ತಿವೆ. ಈ ಪ್ಲಾಂಟ್‌ಗಳಲ್ಲಿರುವ ಉಪ್ಪು ನೀರಿನ ಪ್ರಭಾವದಿಂದ ಅಕ್ಕ ಪಕ್ಕದಲ್ಲಿರುವ ಸ್ಥಳಿಯ ರೈತರ ನೂರಾರು ಎಕ್ಕರ ಪಲವತ್ತಾದ ಕೃಷಿಭೂಮಿಯು ತನ್ನ ಪಲವತ್ತತೆಯನ್ನು ಕಳೆದುಕೊಂಡು ಕೃಷಿ ಭೂಮಿಗಳು ಬಂಜರು ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಈ ಪ್ಲಾಂಟ್‌ನ ಉಪ್ಪು ನೀರು ಸಂಗ್ರಹಣೆಯಿಂದ ಅಕ್ಕಪಕ್ಕದ ಗದ್ದೆಗಳಲ್ಲಿ ಉಪ್ಪುನೀರಿನ ಒರತೆಗಳು ಎಳುತ್ತಿದ್ದು ಇದರಿಂದ ಕೃಷಿ ಭೂಮಿಯಲ್ಲಿ ಬೆಳೆಗಳಾದ ಭತ್ತ ಶೆಂಗಾ ಇನ್ನಿತರ ಬೆಳೆಗಳನ್ನು ಬೆಳೆಸಲಾಗದೆ ಕೃಷಿ ಭೂಮಿಗಳನ್ನು ಖಾಲಿ ಬಿಡುವಂತ ಪರಿಸ್ಥಿತಿ ಎದುರಾಗಿದೆ.
ಈ ಸಿಗಡಿ ಕೆಂದ್ರದಿಂದ ಅಕ್ಕಪಕ್ಕದ ಕುಡಿಯುವ ನೀರಿನ ಬಾವಿಯ ನೀರು ಸಹ ಉಪ್ಪಾಗಿದ್ದು, ಸ್ಥಳಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಿಸುತ್ತದ್ದಾರೆ . ಹಗಲು ರಾತ್ರಿಯೆನ್ನದೆ ಸಾಕಣಿಕಾ ಕೇಂದ್ರದ ಜನರೇಟರ್ ಚಾಲನೆ ಇಡುವುದರಿಂದ ಸ್ಥಳಿಯರಿಗೆ, ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಅಲ್ಲದೆ ಅಲ್ಲಿನ ಸ್ಥಳಿಯ ನಿವಾಸಿಗಳು ಹರಸಾಹಸ ಪಟ್ಟು ಊರಿಗೆ ಒಂದು ಸಂಪರ್ಕ ರಸ್ತೆ ಮಾಡಿಕೊಂಡಿದ್ದು ಈ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ಪ್ರತಿನಿತ್ಯ ಎಣಿಕೆಗೆ ಸಾಧ್ಯವಾದಷ್ಟು ಘನ ವಾಹನಗಳಾದ ಲಾರಿಗಳ ಓಡಾಟದಿಂದ ರಸ್ತೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಕೇವಲ ಲಘು ವಾಹನ ಹಾಗು ಜನ ಸಾಮಾನ್ಯರಿಗೆ ತಿರುಗಾಡುವ ದೃಷ್ಟಿಯಿಂದ ನಿರ್ಮಾಣವಾಗಿದ್ದು ಈ ಕೇಂದ್ರದ ಘನ ವಾಹನದ ಸಾಗಣೆಯಿಂದ ಸ್ಥಳಿಯರು ತಮ್ಮ ಸಂಪರ್ಕ ರಸ್ತೆಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply