Header Ads
Header Ads
Header Ads
Breaking News

ಭಟ್ಕಳ ತಾಲೂಕಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ದೇವಿ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ

ನವರಾತ್ರಿಯ ಈ ಸಮಯದಲ್ಲಿ ಭಕ್ತರು ಹೆಚ್ಚು ಹೆಚ್ಚು ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಶ್ರದ್ದಾ ಭಕ್ತಿಯಿಂದ ನವರಾತ್ರಿಯ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾರೆ.

ಭಟ್ಕಳದ ಕೆಲವೊಂದು ಕಡೆಗಳಲ್ಲಿ ಪುರಾತನ ದೇವಾಲಯಗಳು ಇಂದಿಗೂ ಅತ್ಯಂತ ಭಕ್ತಜನರ ಅಭೀಷ್ಟಗಳನ್ನು ಪೂರೈಸುತ್ತಾ ಬರುತ್ತಿದ್ದಾಳೆ. ಅವುಗಳಲ್ಲಿ ಅನೇಕ ದೇವಿ ದೇವಸ್ಥಾನಗಳೂ ಕೂಡಾ ಮುಖ್ಯವಾದವುಗಳು. ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ದೇವಿ ದೇವಸ್ಥಾನಗಳಲ್ಲಿ ನವರಾತ್ರಿಯ ವಿಶೇಷವಾಗಿ ಜಪ-ತಪ, ಪಾರಾಯಣ, ಹೋಮಹವನ ನಿತ್ಯವೂ ದೇವಿಯನ್ನು ವಿವಿಧ ರೂಪದಲ್ಲಿ ಅಲಂಕರಿಸಿ ಸಹಸ್ರ ನಾಮ ವಿಶೇಷಣೆಗಳು ಮತ್ತು ವಿಶೇಷ ಪೂಜೆಗಳು ನಡೆದವು. ಪೂಜಾ ವಿಧಿವಿಧಾನದ ನಂತರ ಭಕ್ತರಿಗೆ ನವರಾತ್ರಿಯ ಪ್ರಸಾದ ಭೋಜನದ ವ್ಯವಸ್ಥೆಗಳು ನಡೆದವು.

ಭಟ್ಕಳ ತಾಲೂಕಿನಲ್ಲಿ ವಿವಿದ ಅಮ್ಮನವರ ದೇವಸ್ಥಾನಗಳಾದ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾ ನವರಾತ್ರಿ ಕೊನೆಯ ದಿನದಂದು ವಿಶೇಷ ವಿಜಯದಶಮಿಯಂದು ನವಚಂಡಿಕಾ ಹವನ ನಡೆಯಲಿದೆ. ಈ ನಡುವೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವರದಿ ರಾಘವೇಂದ್ರ ಮಲ್ಯ . ಭಟ್ಕಳ

Related posts

Leave a Reply