Header Ads
Header Ads
Breaking News

ಭಟ್ಕಳ ತಾಲೂಕು ಪಂಚಾಯತ್ ಕೆಡಿಪಿ ಸಭೆ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂದ ಶಾಸಕರು

ಮುಂದಿನ ಕೆಡಿಪಿ ಸಭೆಯಲ್ಲಿ ಆಯಾ ಇಲಾಖೆಯ ಪ್ರಥಮ ಅಧಿಕಾರಿಗಳೇ ಸಭೆಗೆ ಹಾಜರಾಗಬೇಕೆಂದು ಶಾಸಕ ಸುನೀಲ್ ನಾಯ್ಕ ಸಭೆಯಲ್ಲಿ ಠರಾವು ಮಾಡುವಂತೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಮೊದಲ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಸುನಿಲ ನಾಯ್ಕ ಆದೇಶ ನೀಡಿದರು.ಸಭೆಯಲ್ಲಿ ಆರೋಗ್ಯ ಇಲಾಖೆಯಿಂದ ವರದಿ ವಾಚನವನ್ನು ಆರಂಭಿಸಿದ ಶಾಸಕ ಸುನಿಲ ನಾಯ್ಕ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬರುವಂತಹ ರೋಗಿಗಳ ತಪಾಸಣೆಗೆ ವೈದ್ಯರಿಲ್ಲದೇ ಸ್ಟಾಫ್ ನರ್ಸ್‌ನಲ್ಲಿ ಆಸ್ಪತ್ರೆ ನಡೆಸುತ್ತಿದ್ದೀರಿ. ಅದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಜೆ 4.30ಕ್ಕೆ ಮುಚ್ಚಲಾಗುತ್ತಿದೆ. ಅದರ ಬಳಿಕ ಬರುವಂತಹ ರೋಗಿಗಳಿಗೆ ತುರ್ತು ಸೇವೆಗೆ ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಶಾಸಕ ಸುನಿಲ್ ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್ ಅವರಿಗೆ ಪ್ರಶ್ನಿಸಿದರು. ಆಸ್ಪತ್ರೆ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಲಿಖಿತ ರೂಪದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ವರದಿ ಮಾಡುವಂತೆ ಸೂಚನೆ ನೀಡಿದರು

 

.ಇನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನಕರ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ವಿವರಿಸಿದ್ದು, ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆಯನ್ನು ನೀಡುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಕಾರ್ಯ ನಿರ್ವಹಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿದ್ದು ಒಂದು ವೇಳೆ ಅಂತ ಸಮಸ್ಯೆಯಾಗಿದ್ದಲ್ಲಿ ಅದಕ್ಕೆ ವೈದ್ಯರುಗಳೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದರು.ಹೆರಾಡಿ ಎಂಬ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಇದ್ದು, ಈ ಗ್ರಾಮ ಅರ್ಧ ಹೊನ್ನಾವರ ಅರ್ಧ ಭಟ್ಕಳ ತಾಲೂಕಿಗೆ ಬರಲಿದ್ದು, ಈ ಬಗ್ಗೆ ಸ್ಥಳೀಯರು ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ ಇಲಾಖೆಗೆ ಕೇಳಿದರೆ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಬಗ್ಗೆ ದೂರನ್ನು ನೀಡಿದ್ದನ್ವಯ ಶಾಸಕ ಸುನಿಲ್ ನಾಯ್ಕ ನೇತೃತ್ವದಲ್ಲಿ ಹೊನ್ನಾವರ ಹಾಗೂ ಭಟ್ಕಳ ಹೆಸ್ಕಾಂ ವಿಭಾಗದ ಅಧಿಕಾರಿಗಳನ್ನು ಕರೆಯಲಿದ್ದೇನೆ ಈ ಸಭೆಗೆ ಹಾಜರಾಗಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ, ತಹಸೀಲ್ದಾರ್ ವಿ.ಪಿ.ಕೊಟ್ರಳ್ಳಿ, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗಮ್ಮ ಗೊಂಡ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply