Header Ads
Header Ads
Breaking News

ಭಟ್ಕಳ ನಗರ ಪ್ರದೇಶದಲ್ಲಿ ಶಾಸಕರ ಬೂತ್ ಮಟ್ಟದ ಸಭೆ ಬೂತ್ ಮಟ್ಟದ ಪ್ರಚಾರ ಕೈಗೊಂಡ ಮಂಕಾಳ ವೈದ್ಯ

ಭಟ್ಕಳದ ನಗರ ಪ್ರದೇಶದ ಬೂತ್ ಮಟ್ಟದಲ್ಲಿ ಮತ ಪ್ರಚಾರ ಕೈಗೊಂಡ ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯರು ಆಸರಕೇರಿ, ಮಣ್ಕುಳಿ, ವಿವಿ ರೋಡ್ ಸೇರಿದಂತೆ ನಗರ ಪ್ರದೇಶದ ವಿವಿಧ ವಾರ್ಡ್‌ಗಳಲ್ಲಿ ಬೂತ್ ಮಟ್ಟದ ಸಭೆ ನಡೆಸಿದರು.

ಇದೇ ವೇಳೆ ಮಾತನಾಡಿದ ಶಾಸಕರು ಹಿಂದಿನ ಬಾರಿ ಪಕ್ಷೇತರ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮೀಸಿದ್ದೇನೆ. ನನ್ನ ಅವಧಿಯಲ್ಲಿ ಪಕ್ಷಬೇದ ಮರೆತು ಎಲ್ಲಾ ಪಕ್ಷದ ಕಾರ್ಯಕರ್ತರ ಕೆಲಸವನ್ನು ಮಡಿಕೊಟ್ಟಿದ್ದೇನೆ. ಹಾಗೇಯೇ ನನಗೆ ಎನೂ ಮತ ನೀಡದ ಬೂತಗಳ ಅಭಿವೃದ್ದಿಗೆ ಕೊಟ್ಯಾಂತರ ರೂಪಾಯಿ ಅನುದಾನ ತಂದು ಅಭಿವೃದ್ದಿ ಮಾಡದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ನಾಯ್ಕ ಮಾತನಾಡಿ ಹಾಲಿ ಶಾಸಕ ಮಂಕಾಳ ವೈದ್ಯರು ಜನಪರ ನಾಯಕರಾಗಿದ್ದು ಭಟ್ಕಳ ಇತಿಹಾಸದಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿಯನ್ನು ಮಂಜುರು ಮಾಡಿಸಿ ಜನಪರ ಕೆಲಸಗಳನ್ನು ಮಾಡಿದ್ದಾರೆ ಒಟ್ಟಾರೆ ಭಟ್ಕಳದ ಸರ್ವತೋಮುಖ ಅಭಿವೃದ್ದಿಗೆ ಶ್ರಮಪಟ್ಟಿದ್ದಾರೆ ಹಾಗು ಅಭಿವೃದ್ದಿಯನ್ನು ಮಾಡಿದ್ದಾರೆ ಇಂತಹ ಜನಪ್ರತಿನಿದಿಯನ್ನು ನಾವು ಮುಂದಿನ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಚುನಾಯಿಸ ಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರುಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೆರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿಂದು ಭಾಸ್ಕರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

ವರದಿ: ರಾಘವೇಂದ್ರ ಮಲ್ಯ ಭಟ್ಕಳ