Header Ads
Header Ads
Breaking News

ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹದಗೆಟ್ಟ ಒಳಚರಂಡಿ ವ್ಯವಸ್ಥೆ

ಕಣ್ಣಿದ್ದು ಕುರುಡಾದ ಭಟ್ಕಳ ಪುರಸಭೆ ಅಧಿಕಾರಿಗಳಿಗೆ ಜನಸಾಮಾನ್ಯರಿಂದ ಹಿಡಿಶಾಪ ಭಟ್ಕಳ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ, ಸಂಪೂರ್ಣವಾಗಿ ಹದಗೆಟ್ಟಿದ್ದು ಪುರಸಭಾ ಅಧಿಕಾರಿಗಳು ಕರ್ತವ್ಯದಿಂದ ನುಣುಚಿಕೊಳ್ಳುವ ಹಿನ್ನೆಲೆಯಲ್ಲಿ ಜನಸಾಮಾನ್ಯ ಸಂಚರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವ ಪ್ರಮಯ ಬಂದೋದಗಿದೆ
ಭಟ್ಕಳ ಪುರಸಭೆ ವ್ಯಾಪ್ತಿಯ ಒಳ ಚರಂಡಿಯ ಸಮಸ್ಯೆ ಹಲವಾರು ವರ್ಷಗಳಿಂದ ತಲೆದೂರಿದ ಸಮಸ್ಯೆಯಾಗಿತ್ತು.

ಈ ಬಗ್ಗೆ ತಾಲೂಕಾಡಳಿತವಾಗಲಿ ಪುರಸಭೆಯಾಗಲಿ ಸೂಕ್ತ ಪರಿಹಾರವನ್ನು ಒದಗಿಸುವ ಪ್ರಯತ್ನವನ್ನೆ ಮಾಡಲಿಲ್ಲಾ ಅಕ್ಷರಶ ಪುರಸಭೆ ವ್ಯಾಪ್ತಿಯ ಎಲ್ಲಾ ಒಳಚರಂಡಿಗಳು ಹೂಳಿನಿಂದ ತುಂಬಿ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಪುರಸಭೆ ಯಾವ ಪ್ರಮಾಣದಲ್ಲಿ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿ ಈ ಬಗ್ಗೆ ಪುರಸಭಾ ಅಧ್ಯಕ್ಷ ಮಟ್ಟಾ ಸಾದಿಕ್ ಅವರನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ತಿಳಿಸಿದರೆ ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಐ.ಆರ್.ಬಿ ಕಂಪನಿಯು ವಹಿಸಿಕೊಂಡಿದ್ದು ಕಾಮಗಾರಿ ಚಾಲ್ತಿಯಲ್ಲಿದೆ ಈ ಹಿನ್ನೆಲೆಯಲ್ಲಿ ಪಟ್ಟಣದ ಒಳಚರಂಡಿ ಕಾಮಗಾರಿ ನಮ್ಮ ವ್ಯಾಪ್ತಿಗೆ ಒಳ ಪಡುವುದಿಲ್ಲ ಎಂದು ಬೇಜವಬ್ದಾರಿಯಾಗಿ ಉತ್ತರಿಸಿದ್ದಾರೆ.

 

Related posts

Leave a Reply