Header Ads
Header Ads
Header Ads
Breaking News

ಭಟ್ಕಳ ಪುರಸಭೆಯ ವಿಶೇಷ ಸಾಮಾನ್ಯ ಸಭೆ ಪುರಸಭೆ ಆಡಳಿತಗಾರರ ಬಳಿ ಚರ್ಚಿಸದಿರುವುದಕ್ಕೆ ಆಕ್ರೋಶ ಅಂಗಡಿ ತೆರವು ಕೈಬಿಡುವಂತೆ ಜಿಲ್ಲಾಡಳಿತಕ್ಕೆ ಆಗ್ರಹ

ಭಟ್ಕಳ ಪುರಸಭೆಯಲ್ಲಿ ಸೆಪ್ಟೆಂಬರ್ 14 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪುರಸಭೆಯ ಸಭಾಗೃಹದಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು, ಪುರಸಭಾ ಸದಸ್ಯರೆಲ್ಲರು ಒಟ್ಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಗಂಭೀರ ಚರ್ಚೆ ನಡೆಸಿದರು.

ಸಭೆಯಲ್ಲಿ ಪುರಸಭಾ ಸದಸ್ಯ ವೆಂಕಟೇಶ ನಾಯ್ಕ ಆಕ್ರೋಶಭರಿತರಾಗಿ ಅಂಗಡಿಕಾರರ ಪರವಾಗಿ ಮಾತನಾಡಿ “ಈ ಹಿಂದೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮೂರ್‍ನಾಲ್ಕು ಬಾರಿ ಠರಾವು ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದರೂ ಯಾವುದೇ ಪ್ರಯೋಜನಾಗಿಲ್ಲ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾದರೆ ಪುರಸಭೆಯಿಂದ ಬಂದ ಠರಾವಿಗೆ ಬೆಲೆಯೇ ಇಲ್ಲವಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ಇನ್ನೋರ್ವ ಸದಸ್ಯ ಸಂದೀಪ ಶೇಟ್ ಮಾತನಾಡಿದ್ದು, “ ಪುರಸಭೆಯಲ್ಲಿ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ಹಾಗೂ ಕಬ್ಜಾ ಪಡೆಯುವ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಆರ್. ಪಿ.ನಾಯ್ಕರಿಗೇನು ಕೆಲಸವಿದೆ. ಅಂಗಡಿಕಾರರು ಬಾಕಿ ಹಣ ತುಂಬಿಸುವಾಗ ಆರ್.ಪಿ.ನಾಯ್ಕರು ಪುನ: ಅಂಗಡಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅಂಗಡಿ ವಾಪಾಸ್ ಸಿಗುತ್ತದೆಂದು ನಂಬಿ ಹಣ ತುಂಬಿದ ಅಂಗಡಿಕಾರರು ಇದೀಗ ಬೀದಿಗೆ ಬೀಳುವಂತಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಕೆ ಎಂ ಅಸ್ಪಾಕ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುರ್ ರಹೀಂ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply