Header Ads
Header Ads
Header Ads
Breaking News

ಭಟ್ಕಳ ಪುರಸಭೆ ಅಂಗಡಿಕಾರರ ಪರವಾಗಿದೆ ಅಧ್ಯಕ್ಷ ಮೊಹ್ಮದ್ ಸಾದೀಕ್ ಮಟ್ಟಾ ಸ್ಪಷ್ಟನೆ

ಭಟ್ಕಳ ಪುರಸಭೆ ಅಂಗಡಿಕಾರರ ಪರವಾಗಿದೆಯೇ ಹೊರತು ಯಾವುದೇ ಕಾರಣಕ್ಕೂ ವಿರುದ್ದವಾಗಿಲ್ಲ. ಅಂಗಡಿಕಾರರ ಪರವಾಗಿ ನಾವು ಮೂರ್‍ನಾಲ್ಕು ಸಲ ಠರಾವು ಮಾಡಿ ಜಿಲ್ಲಾಧಿಕಾರಿಯವರಿಗೆ ಕಳುಹಿಸಿದ್ದರೂ ಅವರು ಸ್ಪಂದಿಸಿಲ್ಲ ಎಂದು ಪುರಸಭೆಯ ಅಧ್ಯಕ್ಷ ಮೊಹ್ಮದ್ ಮಟ್ಟಾ ಸಾಧೀಕ್ ಹೇಳಿದರು.

ಪುರಸಭೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪುರಸಭೆಯ ಅಧ್ಯಕ್ಷ ಮೊಹ್ಮದ್ ಮಟ್ಟಾ ಸಾಧೀಕ್, ಭಟ್ಕಳ ಪುರಸಭೆಯ ಎಲ್ಲಾ 28 ಸದಸ್ಯರೂ ಒಗ್ಗಟ್ಟಾಗಿದ್ದೇವೆ. ನಾವು ಯಾರಿಗೂ ತಾರತಮ್ಯ ಮಾಡುತ್ತಿಲ್ಲ. ಅಂಗಡಿಕಾರರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಅವರ ಪರವಾಗಿಯೇ ನಾವು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ನಮ್ಮ ಠರಾವಿಗೆ ಉತ್ತರ ನೀಡದೇ ಹಾಗೆ ಇಟ್ಟುಕೊಂಡಿದ್ದಾರೆ. ಅಂಗಡಿಕಾರ ರಾಮಚಂದ್ರ ನಾಯ್ಕ ಸಾವಿಗೆ ನೇರ ಹೋಣೆ ಜಿಲ್ಲಾಡಳಿತವಾಗಿದೆ ಶಾಸಕರು ನಡೆಸಿದ ಸಭೆಯಲ್ಲೂ ಅಂಗಡಿಕಾರರ ಪರವಾಗಿ ಠರಾವು ಮಾಡಿಸಿ ಕಳುಹಿಸಲಾಗಿತ್ತು. ಇದಕ್ಕೆ ಮಾತ್ರ ಉತ್ತರ ಬಂದಿದೆ.

ನಮ್ಮ ಪುರಸಭೆಯ ಯಾವ ಸದಸ್ಯರೂ ಅಂಗಡಿಕಾರರ ವಿರುದ್ದವಿಲ್ಲ. ಎಲ್ಲಾ ಸದಸ್ಯರಿಗೂ ಅಂಗಡಿಕಾರರ ಬಗ್ಗೆ ಕಾಳಜಿ, ಪ್ರೀತಿ, ವಿಶ್ವಾಸವಿದೆ ಎಂದು ಹೇಳಿದರು.

ವರದಿ ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply