Breaking News

ಭಟ್ಕಳ ವಿದ್ಯುತ್ ಇಲಾಖೆ ನಿರ್ಲಕ್ಷ್ಯ, ಕರೆಂಟ್ ಹೊಡೆದು ಜಾನುವಾರು ಸಾವು

ಭಟ್ಕಳ ತಾಲೂಕಿನ ಕಡವಿನ ಕಟ್ಟೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯುತ್ ಟ್ರಾನ್ಸಪಾರ್ಮರ್ ಗೆ ಅಳವಡಿಸಿದ ಅರ್ಥಿಂಗ್ ಪೈಪ್‌ನಿಂದ ಮಿಂಚುರಿ ಸೋರಿಕೆಯಾಗಿ ಆಹಾರವನ್ನರಸುತ್ತಾ ಬಂದ ಅಮಾಯಕ ಆಕಳು ಕರೆಂಟ್ ಸ್ಪರ್ಶಕ್ಕೆ ಬಲಿಯಾದ ಘಟನೆ ವರದಿಯಾಗಿದೆ.
ಮಧ್ಯಾಹ್ನ ಕಡವಿನ ಕಟ್ಟೆಯ ರೊಡ್ ಪಕ್ಕ ಮೇಯುತ್ತಿದ್ದ ಆಕಳು ಹೆಸ್ಕಾಮ್ ಇಲಾಖೆಯ ಬೇಜವಾಬ್ದಾರಿತನಕ್ಕೆ ಬಲಿಯಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಆಕಳ ಮಾಲಿಕ ರವಿ ನಾಯ್ಕ ನಮ್ಮ ಆಕಳು ಅವಘಡಕ್ಕೆ ಬಲಿಯಾಗಿರುವುದು ಖಚಿತವಾಗಿರುತ್ತದೆ. ಈ ಬಗ್ಗೆ ನಾವು ಈಗಾಗಲೆ ಹೆಸ್ಕಾಂ ಇಲಾಖೆಗೆ ತಿಳಿಸಿದ್ದೆವೆ. ಆಕಳ ಸಾವಿನಿಂದ ಆದ ನಷ್ಟವನ್ನು ನಮಗೆ ತುಂಬಿಕೊಡಬೇಕು ಎಂದು ಆಗ್ರಹಿಸಿದರು. ಇನ್ನು ವಿ೪ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಇಲಾಖೆಯ ತಾಂತ್ರಿಕ ಸಹಾಯಕರಾದ ಶ್ರೀಕಾಂತ ಮಾತನಾಡಿ, ಆಕಳು ವಿದ್ಯುತ್ ಟ್ರಾನ್ಸಪಾರ್ಮರ್ ಪಕ್ಕದಲ್ಲೆ ಸಾವು ಕಂಡಿದೆ ಈ ಬಗ್ಗೆ ಶಿರಸಿಯ ಇಲೆಕ್ಟ್ರಿಕ್ ಇನ್ಸಪೆಕ್ಟರ್‌ಗೆ ಮಾಹಿತಿಯನ್ನು ಕೊಡುತ್ತೆವೆ. ಅವರು ಸ್ಥಳ ಪರಿಶೀಲನೆ ನಡೆಸಿ ಅವರ ವರದಿಯನ್ನು ಆದರಿಸಿ ಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸಲಾಗುವುದು ಎಂದು ಹೇಳಿದರು.

Related posts

Leave a Reply