Header Ads
Header Ads
Header Ads
Breaking News

ಭತ್ತದ ಕೃಷಿಯೊಂದಿಗೆ ಸಾಂಪ್ರದಾಯಿಕ ಜೀವನ ಸುಳ್ಯದ ಉಬರಡ್ಕದಲ್ಲಿದೆ ಕೃಷಿ ಕುಟುಂಬ ವಿವಿಧ ಭತ್ತದ ತಳಿ ಬೇಸಾಯ ಮಾಡುತ್ತಿರುವ ಕೃಷಿಕರು

 
ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭತ್ತದ ಕೃಷಿ ಸಂಪೂರ್ಣ ಅವನತಿಯ ಅಂಚಿನದಲ್ಲಿದ್ದು ಭತ್ತದ ಕೃಷಿಯೊಂದಿಗೆ ಸಾಂಪ್ರಾದಾಯಿಕ ಜೀವನ ನಡೆಸುತ್ತಿರುವ ಕೃಷಿ ಕುಟುಂಬವೊಂದು ಸುಳ್ಯದಲ್ಲಿದೆ ಅವರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ ಬನ್ನಿ…

ಸುಳ್ಯ ನಗರದಿಂದ ೧೦ ಕಿ.ಮೀ. ದೂರದ ಉಬರಡ್ಕ ಗ್ರಾಮದ ಮದಕ ಶುಭಕರ ಪ್ರಭು ಅವರ ಮನೆಗೆ ಭೇಟಿ ನೀಡಬೇಕು. ಶುಭಕರ ಪ್ರಭು ಚಂದ್ರಕಲಾ ದಂಪತಿ ಮಕ್ಕಳಾದ ಚೇತನ್, ಚೈತನ್ಯ ಚಂದ್ರಕಲಾ ಅವರ ಸಹೋದರಿ ಶಶಿಕಲಾ ಹಾಗೂ ಪತಿ ರಮೇಶ್ ಸಹಿತ ೬ ಮಂದಿಯ ಕುಟುಂಬ ಮುಖ್ಯವೃತ್ತಿಯಾಗಿ ಭತ್ತ ಕೃಷಿಯನ್ನೇ ನೆಚ್ಚಿಕೊಂಡಿದೆ. ಇದರೊಂದಿಗೆ ಅಡಿಕೆ, ತೆಂಗು, ತರಕಾರಿ ಜೊತೆ ಗಿಡಮೂಲಿಕೆಗಳಿವೆ. ಸುಮಾರು ೫ .೩೦ ಎಕರೆ ಜಮೀನು ಪೈಕಿ ಒಂದು ಏಕ್ರೆಯಲ್ಲಿ ಭತ್ತದಕೃಷಿಯಿದೆ. ಹಿಂದೆ ವರ್ಷಕ್ಕೆರಡು ಬಾರಿ (ಏಣಲು ಮತ್ತು ಸುಗ್ಗಿ)ಬೇಸಾಯ ಮಾಡುತ್ತಿದ್ದವರು ಈಗ ನೀರಿನ ಅಭಾವದಿಂದಾಗಿ ೧ ಬೆಳೆ ಏಣಲು ಮಾತ್ರ ಕೈಗೊಳ್ಳುತ್ತಿದ್ದಾರೆ. ಹಿಂದೆ ‘ಜಯ’ ತಳಿ ಬಳಸುತ್ತಿದ್ದರೆ ಈಗ ರಾಜಕಯಮೆ ಹಾಗೂ ತೋಟಗಾರಿಕ ಇಲಾಖೆಯಲ್ಲಿ ದೊರೆಯುವ ‘ಸುಮಾ’ ತಳಿ ಬೇಸಾಯ ಮಾಡುತ್ತಿದ್ದಾರೆ. ಇವೆರಡನ್ನೇ ಈಗ ನಾಟಿ ಮಾಡಿದ್ದು ಹಸನಾಗಿ ಬೆಳೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.

ಒಂದು ಬೆಳೆಗೆ ಸುಮಾರು ೩೦ ಸೇರು ಅಂದರೆ ಅಂದಾಜು ೩೦ ಕೆಜಿಯಷ್ಟು ಭತ್ತ ಬಿತ್ತನೆ ಬಳಸುತ್ತಿದ್ದು ಬೆಳೆಯಾದಾಗ ೧೭ ಕ್ವಿಂಟಾಲ್ ಇಳುವರಿಯಾಗುತ್ತಿದೆ.ಕಳೆದೆರಡು ವರ್ಷಗಳಿಂದ ಇವರಿಗೆ ದೊರೆತ ಇಳುವರಿ ಅಧಿಕ. ಇದರಲ್ಲಿ ೬೫ ಶೇ. ಅಕ್ಕಿ ದೊರೆಯುತ್ತಿದೆ ಅಂದರೆ ಸುಮಾರು ೯ ಕ್ವಿಂಟಾಲ್ ಅಕ್ಕಿ ಮನೆ ಖರ್ಚಿಗೆ ೬ ಕ್ವಿಂಟಾಲ್ ಉಪಯೋಗವಾದರೆ ಉಳಿದ ೩ ಕ್ವಿಂಟಾಲ್ ಬಂದುಬಾಂದವರಿಗೆ ಹಂಚಿಹೋಗುತ್ತಿದೆ ಎನ್ನುತ್ತಾರೆ ಶುಭಕರ ಅವರ ಪತ್ನಿ ಚಂದ್ರಕಲಾ.

ಆಹಾರ ಮತ್ತು ವಾಣಿಜ್ಯ ಬೆಳೆಗಳೊಂದಿಗೆ ಗಿಡಮೂಲಿಕೆಗಳಿವೆ. ಮನೆಯ ಯಜಮಾನ ಅವರು ಹಿಂದೆ ನಾಟಿವೈದ್ಯರಾಗಿದ್ದರು. ಈಗ ನಿಧನರಾಗಿದ್ದಾರೆ. ಆದರೆ ಅವರು ಕಿರಿಯರಿಗೆ ನಾಟಿವೈದ್ಯದ ಪರಂಪರೆಯನ್ನು ನೀಡದಿರುವುದರಿಂದ ಮನೆಯಲ್ಲಿ ನೀಡುತ್ತಿಲ್ಲವಾದರೂ ವಿಷಚಿಕಿತ್ಸೆಗೆ ನೀಡುವ ಔಷಧಿ ಗಿಡ ಸಹಿತ ಈಶ್ವರಬಳ್ಳಿಘಿ, ಗರುಡಪಾತಾಳ, ಸೋಮವಾರಬೇರು ಸಾಮಾನ್ಯ ಬಳಕೆಯ ಔಷಧಿಯ ಸಸಿಗಳ ಭಂಡಾರವಿದೆ. ಇದರೊಂದಿಗೆ ಪೂಜಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ಕದಿರ ಒಂದು ಗಿಡ ಹೊರತುಪಡಿಸಿ ಉಳಿದೆಲ್ಲಾ ಶಮಿ, ಪಾಲಶ, ಅಶ್ವತ, ಬಿಲ್ವಪತ್ರೆ, ಉತ್ತರಣೆ, ದುರ್ವೆ, ದರ್ಬೆ ಸಹಿತ ಎಲ್ಲಾ ಬಗೆಯ ಸೊತ್ತುಗಳಿವೆ.

ಹಳ್ಳಿಯ ವಾತಾವರಣ ಚೆನ್ನ. ಪೇಟೆಯಲ್ಲಿ ಕ್ರೇಜಿ ಇದೆ. ತಾನು ಬಾಂಬೆ, ಗುಜರಾತ್‌ಗಳಲ್ಲಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೆ. ಕೃಷಿಯಲ್ಲಿ ಅಷ್ಟೇನೂ ಲಾಭವಿಲ್ಲದಿದ್ದರೂ ಜೀವನವೇ ಖುಷಿ ಕೊಡುತ್ತಿದೆ ಎಂದು ಪ್ರತಿಕ್ರಿಯಿಸುತ್ತಾರೆ ಕೃಷಿಕ ಶುಭಕರ ಪ್ರಭು

ಭತ್ತದ ಕೃಷಿ ಅವನತಿಯತ್ತ ಸಾಗುತ್ತಿರುವ ಇಂದಿನ ದಿನಗಳಲ್ಲಿ ಸುಳ್ಯದ ಉಬರಡ್ಕ ಗ್ರಾಮದಲ್ಲಿ ಶುಭಕರ ಪ್ರಭು ಅವರು ಭತ್ತದ ಬೇಸಾಯ ಮಾಡಿ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ. ಭತ್ತ ಬೇಸಾಯದ ಜೊತೆಗೆ ತರಕಾರಿ, ಔಷಧೀಯ ಗಿಡಗಳನ್ನು ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ

ವರದಿ ತೇಜೇಶ್ವರ್ ತೊಡಿಕಾನ

Related posts

Leave a Reply