Header Ads
Breaking News

ಭದ್ರ ಹೋಂ ಅಪ್ಲೈಯನ್ಸ್‍ನಲ್ಲಿ ವಿವಿಧ ಬಣ್ಣದ ಮಣ್ಣಿನ ಹಣತೆಗಳು

ಬಂಟ್ವಾಳ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಮನೆ ಮುಂದೆ ಸಾಲು ಸಾಲು ಹಣತೆ ಹಚ್ಚಿ, ರಂಗೋಲಿ ಬಿಡಿಸಿ, ಬಣ್ಣ ಬಣ್ಣದ ಗೂಡದೀಪ, ಆಕಾಶಬುಟ್ಟಿಗಳನ್ನು ತೂಗುಹಾಕಿ ಬೆಳಕಿನ ಚಿತ್ತಾರದೊಂದಿಗೆ, ದೀಪಾವಳಿ ಆಚರಿಸಿ ಸಂಭ್ರಮಿಸುವುದು ಹಿಂದಿನಿಂದಲೂ ನಡೆದು ಕೊಂಡು ಬಂದ ಸಂಪ್ರದಾಯ. ಕೊರೊನಾ ಮಹಾಮಾರಿಯಿಂದ ಕಂಗೆಟ್ಟ ಜನರಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಹಾಗೂ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಕಲ್ಪನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಬಣ್ಣ ಬಣ್ಣದ ಮಣಿನ ಹಣತೆಗಳು ಹಾಗೂ ಚಿತ್ತಾಕರ್ಷಕವಾದ ಮಣ್ಣಿನ ಗೂಡುದೀಪಗಳು ಜನರ ಗಮನ ಸೆಳೆಯುತ್ತಿದೆ.ಹಿಂದೆಲ್ಲಾ ಮಣ್ಣಿನ ಹಣತೆಗಳನಿಟ್ಟು ದೀಪಾವಳಿ ಆಚರಿಸಲಾಗುತಿತ್ತು. ಕ್ರಮೇಣ ಪಿಂಗಾಣಿ ಹಣತೆಗಳು ಮರುಕಟ್ಟೆಗೆ ಲಗ್ಗೆ ಇಟ್ಟ ಬಳಿಕ ಮಣ್ಣಿನ ಹಣತೆಗಳು ಮೂಲೆಗುಂಪಾಗಿದ್ದವು. ಆದರೆ ಈ ಬಾರಿ ಬಣ್ಣ ಬಣ್ಣದ ವೈವಿಧ್ಯಮಯ ಮಣ್ಣಿನ ಹಣತೆಗಳೊಂದಿಗೆ ಮಣ್ಣಿನಿಂದಲೇ ತಯಾರಿಸಿದ ಗೂಡುದೀಪಗಳು ಮಾರುಕಟ್ಟೆ ಪ್ರವೇಶಿಸಿದ್ದು ಮತ್ತೆ ಮಣ್ಣಿನ ಕಲಾಕೃತಿಗಳಿಗೆ ಬೇಡಿಕೆ ಹುಟ್ಟಿಸಿದೆ. ಬಂಟ್ವಾಳದ ಅಗ್ನಿಶಾಮಕ ಠಾಣೆಯ ಮುಂದೆ ಇತ್ತೀಚೆಗಷ್ಟೆ ಉದ್ಘಾಟನೆಗೊಂಡ ಭದ್ರ ಹೋಂ ಅಪ್ಲೈಯನ್ಸ್‍ನಲ್ಲಿ ಬಗೆ ಬಗೆಯ, ವಿವಿಧ ಬಣ್ಣದ ಮಣ್ಣಿನ ಹಣತೆಗಳು ಹಾಗೂ ಮಣ್ಣಿನಿಂದ ತಯಾರಿಸಿದ ಬಣ್ಣದ ಗೂಡುದೀಪಗಳು ಮಾರಾಟಕ್ಕೆ ಲಭ್ಯವಿದೆ. ವಿನೂತನ ಮಾದರಿಯ ಮಣ್ಣಿನ ಗೂಡದೀಪಗಳು ಹಾಗೂ ಹಣತೆಗಳು ಜನಾಕರ್ಷಣೆ ಪಡೆದುಕೊಂಡಿದ್ದು ಹೋಂ ಅಪ್ಲೈಯನ್ಸ್ ಗಾಗಿ ಮಳಿಗೆಗೆ ಭೇಟಿ ನೀಡುವ ಗ್ರಾಹಕರು ಗೃಹೋಪಯೋಗಿ ವಸ್ತುಗಳ ಜೊತೆಗೆ ಬಣ್ಣದ ಹಣತೆ ಹಾಗೂ ಗೂಡುದೀಪಗಳನ್ನು ಮನೆಗೊಯ್ಯುತ್ತಿದ್ದಾರೆ. ಸ್ಥಳೀಯ ಗುಡಿಕೈಗಾರಿಕೆ, ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿಯವರ ಆತ್ಮನಿರ್ಭರ ಯೋಜನೆಗೆ ಪೂರಕವಾಗಿ ವಿಭಿನ್ನ ಹಾಗೂ ಆಕರ್ಷಣಿಯವಾಗಿ ಮಣ್ಣಿನಿಂದ ತಯಾರಿಸಿದ ಹಣತೆ ಹಾಗೂ ಗೂಡುದೀಪಗಳು ಈ ಬಾರಿಯ ದೀಪಾವಳಿಗೆ ಹೊಸ ಮೆರುಗು ನೀಡಲಿದೆ ಜೊತೆಗೆ ಪರಿಸರಕ್ಕೂ ಪೂರಕವಾಗಿದೆ.

Related posts

Leave a Reply

Your email address will not be published. Required fields are marked *