Header Ads
Header Ads
Breaking News

ಭಯದ ವಾತಾವರಣ ಸೃಷ್ಟಿಸಿದ ಮನೋರೋಗಿ ಯುವಕ ವಶಕ್ಕೆ

ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಭಯದ ವಾತಾವರಣ ಸೃಷ್ಟಿಸಿದ ಮನೋರೋಗಿ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿಯವರು ಸ್ಥಳೀಯರ ನೆರವಿನಿಂದ ವಶಕ್ಕೆ ಪಡೆದು ಮಂಜೇಶ್ವರ ಸ್ನೇಹಾಲಯ ಪುನರ್ ವಸತಿಗೆ ಸೇರಿಸುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಎರಡು ತಿಂಗಳಿನಿಂದ ಹೊರ ರಾಜ್ಯದ ಮನೋರೋಗಿ ಯುವಕ ಸೋಮೇಶ್ವರದಲ್ಲಿ ಬೀಡು ಬಿಟ್ಟಿದ್ದ. ಮಳೆಯಲ್ಲಿ ನೆನೆಯುತ್ತಾ ಅಸಹನೀಯ ಬದುಕು ಸಾಗಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಆತನು ಸಿಟ್ಟು-ಸಿಟ್ಟಾಗಿ ಸಾರ್ವಜನಿಕರ ಮೇಲೆ ಹಲ್ಲೆಯನ್ನು ನಡೆಸಿದ್ದಾನೆ ಅಲ್ಲದೇ ವಾಹನಗಳ ಮೇಲೆ ಕಲ್ಲನ್ನು ಎಸೆದಿದ್ದಾನೆ. ಮಹಿಳೆಯರು ಮತ್ತು ಮಕ್ಕಳನ್ನು ಹಲವು ಬಾರಿ ಗದರಿಸಿದ ಪ್ರಕರಣಗಳು ನಡೆದಿದೆ. ಸಾರ್ವಜನಿಕರು ಆತನಿಂದ ರಕ್ಷಣೆಗಾಗಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರು ಈತನನ್ನು ಚಿಕಿತ್ಸೆಗೆ ಒಳಪಡಿಸುವಂತೆ ಬಹಳ ಪ್ರಯತ್ನ ಮಾಡಿದ್ದರು. ಇದೀಗ ಆತನ ಉಪಟಲ ಹದ್ದು ಮೀರಿದಾಗ ಸ್ಥಳೀಯ ಪಂಚಾಯತ್ ಅಧ್ಯಕ್ಷೆ ಹಾಗೂ ಸ್ಥಳೀಯ ನಿವೃತ್ತ ಯೋಧ ಭಾಸ್ಕರ್ ಪೂಜಾರಿಯವರು ವಿಶು ಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿ ನೆರವು ಕೇಳಿದ್ದಾರೆ. ಸ್ವಂಧಿಸಿದ ವಿಶು ಶೆಟ್ಟಿ ಮಂಜೇಶ್ವರದ ಸ್ನೇಹಾಲಯದ ಪುನರ್ ವಸತಿ ಕೇಂದ್ರದ ವ್ಯವಸ್ಥಾಪಕರಾದ ಜೋಸೆಫ್ ರವರಲ್ಲಿ ಯುವಕನಿಗೆ ಆಶ್ರಯ ಹಾಗೂ ಚಿಕಿತ್ಸೆ ನೀಡಿ ತಮ್ಮ ಆಶ್ರಮದಲ್ಲಿ ನೆಲೆ ಕಲ್ಫಿಸುವಂತೆ ವಿನಂತಿಸಿದ್ದಾರೆ. ವಿನಂತಿಗೆ ಆಶ್ರಮದ ವ್ಯವಸ್ಥಾಪಕರು ಅನುಮತಿಯನ್ನು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *