

ಮಂಗಳೂರಿನ ವಸತಿ ಸಮುಚ್ಚಯದ ಕಸ ನಿರ್ವಹಣೆ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಭಾರತ್ ಕಾರ್ಪೋರೇಶನ್ ಸಂಸ್ಥೆ ಮುಂದಾಗಿದೆ.ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭರತ್ರಾಜ್ ಅವರು,ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದ ಭೀಕರ ಕಸದ ನಿರ್ವಹಣೆ ಘಟಕದ ಭೀಕರ ಅಪಘಾತದ ಮಂಗಳೂರಿನ ಮಹಾನಗರ ಪಾಲಿಕೆ ತುಂಬಲಾಗದ ನಷ್ಟ ಅನುಭವಿಸಿದೆ. ತೊಂದರೆಯಾದ ಕಾರಣಕ್ಕೆ 20ಕ್ಕಿಂತ ಮನೆಗಳಿರುವ ವಸತಿ ಸಮುಚ್ಚಯಗಳಿಗೆ ಮಹಾನಗರ ಪಾಲಿಕೆಯು ತಮ್ಮದೇ ಸ್ವಂತ ಕಸ ನಿರ್ವಹಣೆ ಘಟಕವನ್ನು ಸ್ಥಾಪಿಸಲು ತಿಳಿಸಿದೆ. ಈ ತರಹದ ಘಟಕವನ್ನು ಸ್ಥಾಪಿಸಲು ವಸತಿ ಸಮುಚ್ಚಗಳಿಗೆ ಜಾಗದ ತೊಂದರೆ ಮತ್ತು ಕೆಲಸಗಾರರ ತೊಂದರೆ ಇರುವುದರಿಂದ ಹೆಚ್ಚಿನ ವಸತಿ ಸಮುಚ್ಚಗಳಿಗೆ ಹೆಚ್ಚು ಕಷ್ಟಕರವಾಗುತ್ತದೆ. ಹೀಗಾಗಿ ಭರತ್ ಕಾರ್ಪೋರೇಶನ್ ಸಂಸ್ಥೆಯು ಇದಕ್ಕಾಗಿ ಸೂಕ್ತ ಪರಿಹಾರವನ್ನು ಒದಗಿಸುತ್ತದೆ. ಭರತ್ ಕಾರ್ಪೋರೇಶನ್ ಸಂಸ್ಥೆಯು ಈಗಾಗಲೇ ಸ್ವಚ್ಚಸ್ತ್ರಾ ಘಟಕವನ್ನು ಕರ್ನಾಟಕದ ಮೊತ್ತ ಮೊದಲ ಬಾರಿಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಸ್ಥಾಪಿಸಿದೆ ಮತ್ತು ಐಎಸ್ಒ ಸರ್ಟಿಫೈಡ್ ಕಂಪನಿ ಆಗಿರುತ್ತದೆ. ಒಟ್ಟು 50 ಟನ್ ಪ್ರೊಜೆಕ್ಟ್ ನಮ್ಮ ಖಾಸಗಿ ಜಾಗದಲ್ಲಿ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯ್ಲಲಿ ನಿಥಿಲ್ ಉಪಸ್ಥಿತರಿದ್ದರು.