Header Ads
Header Ads
Breaking News

ಉಡುಪಿಯಲ್ಲಿ ಸಿಐಟಿಯುನಿಂದ ಪ್ರತಿಭಟನೆ

ಉಡುಪಿ ತಾಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘ ಉಡುಪಿ ತಾಲೂಕು ಇದರ ವತಿಯಿಂದ ಉಡುಪಿಯ ಕಲ್ಪನ ಬಸ್ ನಿಲ್ದಾಣದ ಬಳಿ ಇರುವ ಪಿಎಫ್ ಕಚೇರಿಯ ಮುಂಭಾಗದಲ್ಲಿ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಹಲವಾರು ಬೀಡಿಕಾರ್ಮಿಕರು ಸೇರಿದಂತೆ ,ಕಾರ್ಮಿಕ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಮಾತನಾಡಿದ ಪಿಂಚಣಿದಾರರ ಸಂಘದ ರಾಜ್ಯಾಧ್ಯಕ್ಷ ಎಚ್ ನರಸಿಂಹ ರವರು ಪಿಂಚಣೀದಾರರ ಬೇಡಿಕೆಗಳಾದ ಕನಿಷ್ಟ ಪಿಂಚಣಿಹಣವನ್ನುರುಪಾಯಿ 1೦೦೦ ದಿಂದ 6೦೦೦ಕ್ಕೆ ಏರಿಸಬೇಕು, ಪಿಂಚಣಿ ಹಾಗೂ ಪಿಎಫ್ಗೆ ಆಧಾರ್ ಕಾರ್ಡ್ ಅನ್ನು ಕಡ್ದಾಯ ಗೊಳಿಸಬೇಕು.ಪಿಂಚಣಿ ಅರ್ಜಿಯ ನೇರ ನೇಮಕಾತಿ ರದ್ದುಗೊಳಿಸಬೆಕು ಎಂದು ಒತ್ತಾಯಿಸಿದರು.

ಆದರೆ ಈಗ ಪಿಂಚಣಿ ಪಡೆಯುಲು ಆಧಾರ್ ಕಾರ್ಡನ್ನು ಕಡ್ದಾಯ ಮಾಡಿದ್ದು ಇದರಿಂದ ಹಿಂದೆ ಕಂಪೆನಿ ಅಥವಾ ಕಾರ್ಖಾನೆಗಳಲ್ಲಿ ನೀಡಿದ್ದ ಜನ್ಮದಿನಾಂಕ ವು ಅಧಾರ್ ಕಾರ್ಡ್ ನಲ್ಲಿರುವ ಜನ್ಮದಿನಾಂಕವು ವಿಭಿನ್ನವಾಗಿದ್ದು ಇದರಿಮ್ದ ನಮಗೆ ನಮ್ಮ ಪಿಂಚಣಿಯನ್ನು ಪಡೆಯಲು ತೊಂದರೆಯಾಗುತ್ತಿದೆ.ಪಾನ್ ಕಾರ್ಡ್ ನಲ್ಲಿಯೂ ಕೂಡಾ ನಮ್ಮ ಜನ್ಮ ದಿನಾಂಕವಿ ಬದಲಾಗಿದ್ದು ಪಿಎಫ್ ಹಿಂಪಡೆಯಲಾಗುತ್ತಿಲ್ಲ ಎಂದರು.ಹಾಗಾಗಿ ನಮಗೆ ಜನ್ಮದಿನಾಂಕದ ವಿಷಯದಲ್ಲಿ ನಮಗೆ ವಿನಾಯಿತಿಯನ್ನು ನೀಡುಬೇಕು ಎಂದು ಒತ್ತಾಯಿಸಿದರು.
ಉಡುಪಿ ತಾಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘದ ಉಡುಪಿ ಘಟಕದ ಅಧ್ಯಕ್ಷೆ ಲಲಿತ, ಕಜಾಂಜಿ ಸುಂದರಿ, ಕಾರ್ಯದರ್ಶಿ ಉಮೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *