Header Ads
Header Ads
Header Ads
Breaking News

ಭಾಗವತ ಪಟ್ಲ ವಿರುದ್ಧ ಒಮ್ಮತದ ಶಿಸ್ತುಕ್ರಮ : ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸ್ಪಷ್ಟನೆ

 

ಪಟ್ಲ ಶೆಟ್ಟಿಯವರನ್ನು ರಂಗಸ್ಥಳದಿಂದ ಕೆಳಗಿಳಿಸಿದ್ದೇನೆ ಎನ್ನುವುದು ಮಾಧ್ಯಮಗಳಲ್ಲಿ ಬಂದಿದೆ, ನಾನು ಭಾಗವತಿಗೆಗೆ ಹೋಗುವಾಗ ಹೇಳಿದ್ದೇನೆ ಭಾಗವತಿಗೆ ಮಾಡುವುದು ಬೇಡ ಎಂದು ಆದರೂ ರಂಗಸ್ಥಳ ಭಾಗವತಿಗೆಯಲ್ಲಿ ತೊಡಗಿದ್ದ ಬಾಗವತರನ್ನು ಎಬ್ಬಿಸಿ ಅವರು ಕುಳಿತುಕೊಂಡಿದ್ದಾರೆ. ಆಗ ನಾನು ನೀವು ಈ ಬಾರಿ ಪದ್ಯ ಹೇಳುವುದು ಬೇಡ ಎಂದು ಸೂಚನೆ ನೀಡಿದ್ದೇನೆ, ಈ ಬಗ್ಗೆ ನಾನು ದೇವರ ಎದುರಲ್ಲಿ ಪ್ರಮಾಣ ಮಾಡಲು ಸಿದ್ದನಾಗಿದ್ದೇನೆ ಎಂದು ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ದೇವಳದ ಆಡಳಿತ ಮಂಡಳಿ ಮತ್ತು ಮೇಳದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಅವರನ್ನು ಪಟ್ಲನನ್ನು ಕೆಳಗಿಳಿಸಲು ನಮ್ಮ ಕಡೆಗಳಲ್ಲಿ ಗೂಂಡಗಳಿರಲಿಲ್ಲ ಗೂಂಡಗಳಿರುವುದು ಅವರ ಕಡೆಗಳಲ್ಲಿಯೇ, ಎಬ್ಬಿಸಲು ಅವರ ಮೇಲೆ ಕೈ ಮಾಡಲು ಹೋಗಿಲ್ಲ, ಕಳೆದ ಎರಡು ವರ್ಷದಿಂದ ತೆಜೋವಧೆ ಮಾಡುತ್ತಿದ್ದಾರೆ. ಆದರೆ ನಾವು ಯಾವುದೇ ಹೇಳಿಕೆ ನೀಡಿಲ್ಲ, ಏನಿದ್ದರೂ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸುತ್ತೇನೆ, ಅದರಂತೆ ಪಟ್ಲ ಭಾಗವತನನ್ನು ಮೇಳದಿಂದ ಕೈ ಬಿಟ್ಟು ಶಿಸ್ತು ಕೈಗೊಂಡಿದ್ದೇನೆ, ಕಟೀಲು ಮೇಳದ ಗೌರವ, ಮೇಳದ ಸೇವಾಕರ್ತರ ಗೌರವ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ನಾವು ಎಲ್ಲೂ ಹೇಳಿಕೆ ನೀಡಿಲ್ಲ, ಕಳೆದ ಪತ್ತನಾಜೆ ಬಳಿಕ ನ.22ರಂದು ಕಟೀಲು ದೇವಸ್ಥಾನದಲ್ಲಿ ನಡೆದ ಸೇವೆಯಾಟದ ವರೆಗೆ ಪಟ್ಲ ಸತೀಶ್ ಶೆಟ್ಟಿ ಎಂದೂ ಮೇಳದ ಯಜಮಾನರನ್ನಾಗಲೀ, ದೇವಸ್ಥಾನದ ಮುಖ್ಯಸ್ಥರನ್ನಾಗಿಲೀ ಭೇಟಿ ಮಾಡಿಲ್ಲ. ಮೊನ್ನೆ ಸೇವೆಯಾಟದ ದಿನವೇ ಅವರು ಕಟೀಲಿಗೆ ಬಂದದ್ದು.ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಮೇಳದ ಕಲಾವಿದರನ್ನು ಹಂಚಿಕೆ ಮಾಡಿ ಚೌಕಿಯಲ್ಲೇ ಈ ಬಗ್ಗೆ ಕಲಾವಿದರಿಗೆ ಮಾಹಿತಿನಿಡುವುದು ಸಂಪ್ರದಾಯ. ಪಟ್ಲ ಸತೀಶ್ ಶೆಟ್ಟಿಯನ್ನು ಯಾವ ಮೇಳದ ಭಾಗವತರನ್ನಾಗಿಯೂ ಹೆಸರಿಸಿರಲಿಲ್ಲ. ಮೊದಲೇ ಈ ಬಗ್ಗೆ ಸೂಚನೆ ಸಿಕ್ಕ ಬಳಿಕವೂ ರಂಗಸ್ಥಳಕ್ಕೆ ಭಾಗವತ ಮಾಡಲು ತೆರಳಿದ್ದು ಉದ್ದೇಶಪೂರ್ವಕವಾಗಿದೆ. ವಿವಾದ ಮಾಡುವುದೇ ಅವರ ಉದ್ದೇಶ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಸದಾನಂದ ಆಸ್ರಣ್ಣ , ಸುಧೀರ್ ಶೆಟ್ಟಿ ಕೊಡೆತ್ತೂರ ಗುತ್ತು , ಬಿಪಿನ್ ಪ್ರಸಾದ್ ಶೆಟ್ಟಿ ಕೊಡೆತ್ತೂರು ಗುತ್ತು , ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *