Header Ads
Breaking News

ಭಾರತಕ್ಕೆ ಅಮೆರಿಕದ ನೆರವಿನ ಅಗತ್ಯವಿದೆ : ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

ಭಾರತ ಅಮೆರಿಕ ಸಂಬಂಧ ಬಲಗೊಳ್ಳಬೇಕು ಎಂಬ ಅಪೇಕ್ಷೆ ಬಹು ಕಾಲದಿಂದ ಇತ್ತು. ಭಾರತಕ್ಕೆ ಅಮೆರಿಕದ ನೆರವಿನ ಅಗತ್ಯವಿದೆ. ಅನೇಕ ವರ್ಷದಿಂದ ಅಮೇರಿಕಾದ ಮೇಲೆ ಭಾರತಕ್ಕೆ ಸಂಶಯವಿತ್ತು. ಅಮೆರಿಕಾ ದೇಶ ಪಾಕ್‍ಗೆ ಶಸ್ತ್ರಾಸ್ತ್ರ ನೀಡುತ್ತೆ ಅನ್ನೋದು ಸಂಶಯವಾಗಿವಿತ್ತು ಅಮೆರಿಕದ ಶಸ್ತ್ರಾಸ್ತ್ರಗಳು ಪಾಕ್ ಭಯೋತ್ಪಾದಕರ ಕೈಸೇರುವ ಸಂಶಯವಿತ್ತು. ಆದರೆ ಆ ಸಂಶಯ ಇಂದು ಕೊನೆಗೊಂಡಿದೆ. ಎರಡು ಪ್ರಬಲ ರಾಷ್ಟ್ರಗಳು ಒಟ್ಟಾಗಿ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತದೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಭಾರತದ ನೆಲದಲ್ಲಿ ಟ್ರಂಪ್ ಭಯೋತ್ಪಾದನೆ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ಪಾಕ್‍ಗೆ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಮೋದಿ ಮತ್ತು ಟ್ರಂಪ್‍ರನ್ನು ಸಹಿಸಲಾಗದವರು ಎರಡೂ ದೇಶಗಳಲ್ಲಿ ಇದ್ದಾರೆ.ಟ್ರಂಪ್ ಭೇಟಿಯಿಂದ ಭಾರತಕ್ಕೆ ಬಹಳ ಅನುಕೂಲವಾಗಲಿದೆ ಎಂದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುವುದನ್ನು ಬಿಡಲಿ. ಮೋದಿ ಟ್ರಂಪ್‍ಗೆ ಸಿದ್ದರಾಮಯ್ಯನ ಪಾಠದ ಅಗತ್ಯವಿಲ್ಲ. ಕಾಂಗ್ರೆಸ್ ಮಾತನ್ನು ದೇಶದಲ್ಲಿ ಯಾರೂ ಕೇಳುವುದಿಲ್ಲ ಎಂದು ಸಂಸದೆ ಶೋಭಾ ವ್ಯಂಗ್ಯವಾಡಿದರು.

Related posts

Leave a Reply

Your email address will not be published. Required fields are marked *