Header Ads
Header Ads
Breaking News

ಭಾರತದಲ್ಲಿ ಗೋಮಾಂಸ ರಫ್ತು ನಿಲ್ಲಿಸಲಿ: ಉಳ್ಳಾಲದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿಕೆ

ಭಾರತ ಗೋಮಾಂಸ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಅಲ್ಲದೆ ರಫ್ತು ಮಾಡುವ ಶೇ.70 ಕಂಪನಿಗಳು ಬಹುಸಂಖ್ಯಾತರಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳದ ಬಿಜೆಪಿ ಚುನಾವಣೆ ಸಂದರ್ಭ ರಾಜಕೀಯ ಹುನ್ನಾರ ನಡೆಸುತ್ತಿದೆ. ಗೋವಿನ ಬಗ್ಗೆ ಬಿಜೆಪಿಗೆ ಪ್ರೀತಿ ಇದ್ದರೆ ಕೇಂದ್ರದಲ್ಲಿ ಅಧಿಕಾರ ನಿಮ್ಮ ಕೈಯಲ್ಲಿದ್ದು ಗೋಮಾಂಸ ರಫ್ತು ಮೊದಲು ನಿಲ್ಲಿಸಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು. ಸ್ಮಾರ್ಟ್ ಸಿಟಿಗೆ ಸ್ವಚ್ಛತೆಯೂ ಮುಖ್ಯ. ಈ ಯೋಜನೆಯಡಿ ಶೇ.50 ರಾಜ್ಯ ಸರ್ಕಾರದ ಅನುದಾನವೂ ಇದ್ದು, ಯೋಜನೆ ರೂಪಿಸಲು ಸಮಿತಿಯೂ ಇದೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಸಾಯಿ ಖಾನೆಯಲ್ಲಿ ಆಡು, ಕುರಿ, ಕೋಳಿ ಮಾಂಸವೂ ಮಾರಲಾಗ್ತದೆ. ವೈದ್ಯರು, ತ್ಯಾಜ್ಯ ವಿಲೇವಾರಿ, ಚರಂಡಿ, ಶೆಡ್ ಮುಂತಾದ ವ್ಯವಸ್ಥೆಯೂ ಕಸಾಯಿ ಖಾನೆಯಲ್ಲಿ ಅಗತ್ಯ. ಈ ನಿಟ್ಟಿನಲ್ಲಿ ಯೋಜನೆಯಡಿ 15ಕೋಟಿ ಅನುದಾನ ಮೀಸಲಿಡುವಂತೆ ಸಚಿವ ಯು.ಟಿ.ಖಾದರ್ ಸಲಹೆ ನೀಡಿದ್ದು ಆ ಸಂದರ್ಭ ಮೌನವಾಗಿದ್ದ ಬಿಜೆಪಿ, ಇದೀಗ ಖಾದರ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ವ್ಯರ್ಥ ಆರೋಪ ಮಾಡುತ್ತಿದೆ ಎಂದು ಹಳೇಇದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಹಮ್ಮದ್ ಮುಸ್ತಫಾ ಮಲಾರ್, ಪ್ರದಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಪದಾಧಿಕಾರಿಗಳಾದ ಇಕ್ಬಾಲ್ ಸಾಮಣಿಗೆ ಉಪಸ್ಥಿತರಿದ್ದರು.

Related posts

Leave a Reply