Breaking News

ಭಾರತದಲ್ಲಿ ಟ್ಯಾಬ್ಲೆಟ್ ಮಾರಾಟ,  ಶೇಕಡಾವಾರು ತೀವ್ರ ಇಳಿಕೆ

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮಾರ್ಚ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲಿ ಟ್ಯಾಬ್ಲೆಟ್ಗಳ ಮಾರಾಟ ಪ್ರಮಾಣ ಶೇಕಡ ೧೬ರಷ್ಟು ಇಳಿಕೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ಸಿ‌ಎಮ್‌ಆರ್ ವರದಿ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕ ಅವಧಿ ಜತೆ ಹೋಲಿಸಿದರೂ ಟ್ಯಾಬ್ಲೆಟ್ಗಳ ಮಾರಾಟ ಪ್ರಮಾಣದಲ್ಲಿ ಶೇಕಡ ೬ರಷ್ಟು ಇಳಿಕೆಯಾಗಿದೆ. ಟ್ಯಾಬ್ಲೆಟ್ ಮಾರಾಟ ಇಳಿಕೆಯಿಂದ ಸುಮಾರು ೭.೬ ಲಕ್ಷ ಘಟಕಗಳ ವಹಿವಾಟು ಕುಸಿದಿದೆ. ಪ್ರಸ್ತುತ ಡಾಟಾವೈಂಡ್ ಶೇಕಡ ೩೪ರಷ್ಟು ಮಾರುಕಟ್ಟೆ ಹಂಚಿಕೆ ಹೊಂದಿದ್ದರೆ, ಐಬಾಲ್ ಶೇಕಡ ೧೬ರಷ್ಟು ಮಾರುಕಟ್ಟೆ ಹಂಚಿಕೆ ಹೊಂದಿದೆ.
ಸ್ಯಾಮ್ಸಂಗ್ ಶೇಕಡ ೧೫, ಮೈಕ್ರೋಮ್ಯಾಕ್ಸ್ ಶೇಕಡ ೮ರ ಮಾರುಕಟ್ಟೆ ಹಂಚಿಕೆ ಹೊಂದಿವೆ. ಈ ವರ್ಷದ ಅಂತ್ಯದ ವೇಳೆಗೆ ೪ಜಿ ಟ್ಯಾಬ್ಲೆಟ್ಗಳ ಮಾರಾಟ ಪ್ರಮಾಣ ಶೇಕಡ ೫೦ರಷ್ಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Related posts

Leave a Reply