Breaking News

ಭಾರತದಲ್ಲಿ ವೇತನ ಇಲ್ಲದ ದುಡಿಮೆಯಲ್ಲಿ ಮಹಿಳೆಯರು, ಉದ್ಯೋಗದಲ್ಲಿ ಮಹಿಳಾ ಸ್ನೇಹಿ ವಾತಾವರಣವಿಲ್ಲ

ಭಾರತದ ಪ್ರತಿ ಐವರು ಮಹಿಳೆಯರಲ್ಲಿ ಇಬ್ಬರು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ವೇತನ ಸಹಿತ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ತನ್ನ ಭಾರತದ ಅಭಿವೃದ್ಧಿ ವರದಿಯಲ್ಲಿ ಹೇಳಿದೆ.
ದೇಶದ ಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇದೆ ಎಂಬುದಷ್ಟೇ ಕಳವಳಕಾರಿ ವಿಷಯ ಅಲ್ಲ. ಬದಲಿಗೆ, ೨೦೧೧-೧೨ನೇ ಆರ್ಥಿಕ ವರ್ಷದಲ್ಲಿ ವಿವಿಧ ಸ್ವರೂಪದ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರ ಸಂಖ್ಯೆ, ೨೦೦೪-೦೫ನೇ ಸಾಲಿನಲ್ಲಿ ದುಡಿಯುತ್ತಿದ್ದ ಮಹಿಳೆಯರ ಸಂಖ್ಯೆಗಿಂತ ಕಡಿಮೆ ಇದೆ. ಭಾರತದ ಕಾರ್ಮಿಕ ಕಾನೂನಿನಲ್ಲಿರುವ ನ್ಯೂನತೆಗಳೇ, ಉದ್ಯೋಗದ ಸ್ಥಳದಲ್ಲಿ ಮಹಿಳಾ ಸ್ನೇಹಿ ವಾತಾವರಣ ಇಲ್ಲದಿರಲು ಪ್ರಮುಖ ಕಾರಣ. ಕಾರ್ಮಿಕ ಕಾನೂನಿನಲ್ಲಿ ಲಿಂಗಾಧಾರಿತ ಆದ್ಯತೆಗಳಿಗೆ ಅವಕಾಶ ನೀಡಿದರೆ, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಧ್ಯಯನಕ್ಕಾಗಿ ಮಧ್ಯಪ್ರದೇಶದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ವಿವಿಧ ಸ್ವರೂಪದ ಔದ್ಯೋಗಿಕ ಸಂಸ್ಥೆಗಳಲ್ಲಿ ಪ್ರಾತಿನಿಧಿಕವಾಗಿ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲಾಗಿದೆ. ಉದ್ಯೋಗದಲ್ಲಿ ಮಹಿಳಾ ಸ್ನೇಹಿ ವಾತಾವರಣವಿಲ್ಲ. ವಿಶ್ವದ ಮುಂದುವರಿದ ದೇಶಗಳಲ್ಲಿ ಲಭ್ಯವಿರುವ ಹೆರಿಗೆ ಸೌಲಭ್ಯಗಳು ಭಾರತದಲ್ಲಿ ಲಭ್ಯವಿಲ್ಲ. ಹಲವು ಕ್ಷೇತ್ರಗಳಲ್ಲಿ ದುಡಿಯಲು ಭಾರತದ ಕಾರ್ಮಿಕ ಕಾನೂನು ಮಹಿಳೆಯರಿಗೆ ಅವಕಾಶ ನಿರಾಕರಿಸುತ್ತದೆ. ಸಂಘಟಿತ ವಲಯದಲ್ಲಿ ಉದ್ಯೋಗದ ಸ್ವರೂಪ ಮತ್ತು ಸಮಯದ ಹೊಂದಾಣಿಕೆಗೆ ಅಗತ್ಯ ಪ್ರಮಾಣದ ಅವಕಾಶ ಇಲ್ಲ. ಹೀಗಾಗಿ ಮಹಿಳೆಯರು ಕೆಲಸದಿಂದ ದೂರ ಉಳಿಯುತ್ತಾರೆ. ಉದ್ಯೋಗ ಸೃಷ್ಟಿಯ ಪ್ರಮಾಣ ತೀರಾ ಕಡಿಮೆ ಇದ್ದು, ಹಲವು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಹೆಚ್ಚುವರಿ ಕೆಲಸಗಾರರು ಎಂದು ಪರಿಗಣಿಸುವ ಸ್ಥಿತಿ ಇದೆ. ಅಂತಹ ಮಹಿಳೆಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಇದೂ ಸಹ ಮಹಿಳೆಯರು ಆರ್ಥಿಕ ಚಟುವಟಿಕೆಗಳಿಂದ ದೂರ ಉಳಿಯುವಂತೆ ಮಾಡಿದೆ.
ಹೆರಿಗೆ ರಜೆ ಮತ್ತು ಸೌಲಭ್ಯಗಳನ್ನು ನೀಡುತ್ತಿರುವ ಸಂಸ್ಥೆಗಳು ೪೦, ವೇತನ ಸಹಿತ ಹೆರಿಗೆ ರಜೆ ನೀಡುತ್ತಿರುವ ಸಂಸ್ಥೆಗಳು ೫, ಸೇವಾ ವಲಯದಲ್ಲಿ ಮಹಿಳೆಯರೇ ಮಾಲೀಕರಾಗಿರುವ ಸಂಸ್ಥೆಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ೮೧%, ಅಸಂಘಟಿತ ವಲಯದಲ್ಲಿ ಮಹಿಳೆಯರೇ ಮಾಲೀಕರಾಗಿರುವ ಸಂಸ್ಥೆಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ೯೦%.

Related posts

Leave a Reply