Header Ads
Header Ads
Breaking News

ಭಾರತದಿಂದ ಚರ್ಮ, ಎಮ್ಮೆ ಮಾಂಸ ರಫ್ತು ಕುಸಿತ, ಸಂಸತ್ತಿನಲ್ಲಿ ವಿವರ ನೀಡಿದ ಮಂತ್ರಿ ನಿರ್ಮಲಾ

ಭಾರತದಿಂದ ರಫ್ತಾಗುವ ಮಾಂಸದ ಪ್ರಮಾಣ 2016-17 ನೇ ಸಾಲಿನಲ್ಲಿ 13.53 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಫ್ತು ಪ್ರಮಾಣ ಹೆಚ್ಚಿದೆಯಾದರೂ ಅದರಿಂದ ಬರುವ ಲಾಭ ಕುಗ್ಗಿದ್ದು ೨೦೧೫-೧೬ರಲ್ಲಿ ೨೭,೫೨೮ ಕೋಟಿಯಷ್ಟಿದ್ದ ಲಾಭ ಈ ವರ್ಷ ೨೭,೧೮೪ ಕೋಟಿಗೆ ಇಳಿಕೆಯಾಗಿದೆ. ಸಂಸತ್ ನ ರಾಜ್ಯಸಭೆಯ ಕಲಾಪದಲ್ಲಿ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಂಕಿ ಅಂಶಗಳ ಪ್ರಕಾರ ಎಮ್ಮೆ ಮಾಂಸದ ರಫ್ತು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
೨೦೧೬-೧೭ರ ಏಪ್ರಿಲ್ ಮೇ ತಿಂಗಳಲ್ಲಿ ಎಮ್ಮೆ ಮಾಂಸ ರಫ್ತು ೫೫೪ ಮಿಲಿಯನ್ ಡಾಲರ್ ನಷ್ಟಿತ್ತು. ಈಗ ೫೩೦ ಮಿಲಿಯನ್ ಡಾಲರ್ ಗೆ ಕುಸಿದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇನ್ನು ೨೦೧೫-೧೬ರಿಂದ ಲೆದರ್ ಉತ್ಪನ್ನಗಳ ರಫ್ತು ಸಹ ಕುಸಿದಿದೆ ಎಂದು ಸೀತಾರಾಮನ್ ಸದನಕ್ಕೆ ತಿಳಿಸಿದ್ದಾರೆ.

Related posts

Leave a Reply