Header Ads
Header Ads
Breaking News

ಭಾರತವನ್ನು ಸುಳ್ಳಿನಿಂದ ಕಟ್ಟಬಲ್ಲ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ: ಗೋಪಾಲ್ ಭಂಡಾರಿ ಆರೋಪ

ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಂದೆ ಬಹಳಷ್ಟು ಸವಾಲುಗಳಿದೆ, ಒಂದು ಕಡೆಯಲ್ಲಿ ರಾಷ್ಟ್ರವನ್ನು ಸುಳ್ಳಿನಿಂದ ಕಟ್ಟಬಲ್ಲ ಪಿತೂರಿ, ಮತ್ತೊಂದು ಕಡೆ 125 ಕೋಟಿ ಜನರ ಮಧ್ಯೆ ಅಪನಂಬಿಕೆ ಹುಟ್ಟು ಹಾಕಿ, ಹಿಂಸೆ, ದ್ವೇಶ, ಅಸೂಯೆ, ಪ್ರತಿಕಾರವನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರವನ್ನು ಭದ್ರ ಪಡೆಸುವ ಕೆಲಸಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮಾಡುತ್ತಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಭಾರತ ಮಾತೆಗೆ ಮುಕ್ತಿ ನೀಡುವ ಕೆಲಸ ಕಾಂಗ್ರೆಸ್ ಪಕ್ಷದ ಮುಂದಿದೆ ಎಂಬುದಾಗಿ ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ಹೇಳಿದ್ದಾರೆ.ಅವರು ಕಾಪು ರಾಜೀವ ಭವನದಲ್ಲಿ ನಡೆದ ನೂತನವಾಗಿ ಆಯ್ಕೆಯಾದ, ಕಾಪು ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಎಸ್. ಸುವರ್ಣ ಇವರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ಯಾವುದೇ ಮಜಲುಗಳಲ್ಲೂ ಬದಲಾವಣೆ ಎಂಬುದು ಸ್ವಾಭಾವಿಕ ಅದೇ ರೀತಿ ಕಾಪು ಕಾಂಗ್ರೆಸ್‍ನಲ್ಲೂ ಬದಲಾವಣೆ ಗಾಳಿ ಬೀಸಿದೆ ಮುಂದಿನ ದಿನದಲ್ಲಿ ಕಾಪುವಿನಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಕಾರ್ಯಚರಿಸುವ ಮಹತ್ತರ ಜವಾಬ್ದಾರಿ ಬ್ಲಾಕ್ ಕಾಂಗ್ರೆಸ್ಸಿಗಿದೆ ಎಂದರು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಮಾಜಿ ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಜೆ. ಶೆಟ್ಟಿ ಅನುಪಸ್ಥಿತಿಯಲ್ಲಿ ಜಿಲ್ಲಾ ಅಧ್ಯಕ್ಷ ಜನಾರ್ದನ ತೋನ್ಸೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ದಿವಾಕರ್ ಶೆಟ್ಟಿ ಕಾಪು, ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಹರೀಶ್ ನಾಯಕ್ ಕಾಪು ಮುಂತಾದವರಿದ್ದರು.

Related posts

Leave a Reply