Header Ads
Header Ads
Breaking News

ಭಾರತಿ ಕೊಲೆ ಪ್ರಕರಣ ಕ್ಷೇತ್ರಕ್ಕೆ ಪ್ರಮಾಣಕ್ಕೆ ಬರಲು ಸಿದ್ದನಿದ್ದೇನೆ:ಹರಿಕೃಷ್ಣ ಬಂಟ್ವಾಳ ಹೇಳಿಕೆ

ಬಂಟ್ವಾಳ: ಹಲವು ವರ್ಷಗಳ ಹಿಂದೆ ಸಿದ್ದಕಟ್ಟೆಯಲ್ಲಿ ನಡೆದ ಭಾರತಿ ಕೊಲೆ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ನಾನು ಧರ್ಮಸ್ಥಳ, ಅಥವಾ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರಮಾಣಕ್ಕೆ ಬರಲು ಸಿದ್ದನಿದ್ದೇನೆ. ಧಮ್ ಇದ್ದರೆ ಈ ಬಗ್ಗೆ ಆರೋಪ ಮಾಡುವವರೂ ಅಲ್ಲಿಗೆ ಬರಬೇಕು, ಆ ಸಂದರ್ಭದಲ್ಲಿ ಸಚಿವನಾಗಿದ್ದ ರಮನಾಥ ರೈಯವರು ಈ ಪ್ರಕರಣವನ್ನು ಯಾಕೆ ತನಿಖೆ ಮಾಡಿಸಿಲ್ಲ. ಕೋತಿ ಮೊಸರನ್ನು ತಿಂದು ಮೇಕೆಯ ಮೂತಿಗೆ ಒರೆಸಿದಂತೆ ಈಗ ನನ್ನ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ಧಕಟ್ಟೆಯಲ್ಲಿ ಸಂಗಬೆಟ್ಟು ತಾಲೂಕು ಪಂಚಾಯಿತಿ ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ವಿಜೇತ ಸದಸ್ಯ ಪ್ರಭಾಕರ ಪ್ರಭು ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಸಿದ್ಧಕಟ್ಟೆಯಲ್ಲಿ ಭಾರತಿ ಕೊಲೆ ಬಗ್ಗೆ ಕರಪತ್ರ ಹಂಚಿದ ಕಾಂಗ್ರೆಸ್ಸಿಗರು ಪುಣ್ಯಕ್ಷೇತ್ರದಲ್ಲಿ ಪ್ರಮಾಣಕ್ಕೆ ಸಿದ್ಧರಾಗಬೇಕು. ಕಳೆದ 18ವರ್ಷಗಳ ಹಿಂದೆ ಕಾವಳಮೂಡೂರು ಕಂಬಳ ಸಂದರ್ಭದಲ್ಲಿ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಹತ್ಯೆ ಬಗ್ಗೆ ಏಕೆ ಚಕಾರವೆತ್ತುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರು ರೌಡಿಶೀಟರ್, ಹೊಗಳು ಭಟ್ಟರು, ಮರ ಮತ್ತು ಮರಳು ದಂಧೆಕೋರರನ್ನು ಮಾತ್ರ ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಅವನತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ಪ್ರಮುಖರಾದ ದಿನೇಶ ಅಮ್ಟೂರು, ವಿಜಯ ರೈ ಆಲದಪದವು, ಉಮೇಶ ಗೌಡ ಮಂಚಕಲ್ಲು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply