Header Ads
Breaking News

ಭಾರತೀಕರಣ ಬಿಟ್ಟು ಜಾಗತೀಕರಣದಿಂದ ಬೆಳವಣಿಗೆ ಅಸಾಧ್ಯ : ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿಕೆ

ಆಧುನಿಕ ತಂತ್ರಜ್ಞಾನಗಳ ಪ್ರಭಾವದಿಂದ ನಮ್ಮ ಕಲೆ -ಸ0ಸ್ಕ್ರತ, ಆಚಾರ ವಿಚಾರಗಳಿಗೆ ತೊಡಕು ಉಂಟಾಗಿದೆ. ನಮ್ಮ ಸಂಸ್ಕ್ರತಿಯ ಪ್ರತಿಕವಾದ ಭಾರತೀಕರಣವನ್ನು ಬಿಟ್ಟು ಕೇವಲ ಜಾಗತೀಕರಣ ದಿಂದ ಬೆಳವಣಿಗೆ ಅಸಾಧ್ಯ. ಜಾಗತೀಕರಣದೊಂದಿಗೆ ಭಾರತೀಕರಣ ಸೇರಿದರೆ ಮಾತ್ರ ದೇಶಕ್ಕೆ ಭವಿಷ್ಯ ಇದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ ದುಗಲಡ್ಕ ಇದರ ವತಿಯಿಂದ ದುಗಲಡ್ಕ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ನಡೆದ ಮಿತ್ರ ಕುರಲ್ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ವಿಶ್ರಾಂತ ಪ್ರಾಂಶುಪಾಲರಾದ ಡಾ.ಪ್ರಭಾಕರ ಶಿಶಿಲ ಅಭಿನಂದನಾ ಭಾಷಣ ಮಾಡಿ” ಸ್ಥಳೀಯ ಸಂಸ್ಕೃತಿಯಿಂದಲೇ ದೇಶ ಉಳಿದಿದೆ. ಸ್ಥಳೀಯ ಸಂಸ್ಕೃತಿಯನ್ನು ಕಟ್ಟುವಲ್ಲಿ ಸ್ಥಳೀಯ ನಾಯಕತ್ವ ಮುಖ್ಯ ಎಂದರು. ಮಿತ್ರ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಮಾಣಿಬೆಟ್ಟು ಪುರುಷೋತ್ತಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಂಜೆ ಅಂಗನವಾಡಿ ಕೇಂದ್ರದ ಮಕ್ಕಳಿಂದ ನೃತ್ಯ ವೈಭವ, ದುಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ, ಖ್ಯಾತ ಗಾಯಕರಾದ ಶಶಿಧರ ಮಾವಿನಕಟ್ಟೆ ಮತ್ತು ಬಾಲಕೃಷ್ಣ ನೆಟ್ಟಾರು ಇವರಿಂದ ಸಂಗೀತ ರಸಮಂಜರಿ ನಡೆಯಿತು.

Related posts

Leave a Reply

Your email address will not be published. Required fields are marked *