Header Ads
Breaking News

ಭಾರತೀಯತೆಗೆ ಕನ್ನಡಿ ಎ. ಆರ್ ರೆಹಮಾನ್; ಡಾ. ಎನ್.ಕೆ ಪದ್ಮನಾಭ

“ಎ.ಆರ್ ರೆಹಮಾನ್ ಭಾರತೀಯ ಸಂಗೀತಲೋಕ ಕಂಡ ಅಸಮಾನ್ಯ ಪ್ರತಿಭೆ. ಎಲ್ಲಾ ಪ್ರಕಾರದ ಸಂಗೀತವನ್ನು ಭಾರತದ ದೇಸಿ ಸೊಗಡಿಗೆ ಅನುಗುಣವಾಗಿ ಜನಪ್ರಿಯ ಸಂಗೀತವನ್ನು ರೂಪಿಸಿದ ಕೀರ್ತಿ ರೆಹಮಾನ್ ಗೆ ಸಲ್ಲುತ್ತದೆ” ಎಂದು ಪ್ರಾಧ್ಯಪಕ ಡಾ. ಎನ್.ಕೆ ಪದ್ಮನಾಭ ಹೇಳಿದರು.
ಅವರು ಇತ್ತೀಚೆಗೆ ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಬಿವೋಕ್ ಡಿಜಿಟಲ್ ಮೀಡಿಯಾ & ಫಿಲ್ಮಂ ಮೇಕಿಂಗ್ ವಿಭಾಗ ಆಯೋಜಿಸಿದ ‘ಪಕೋಡಾ ಟೇಲ್ಸ್’ ಸಮಾರಂಭದಲ್ಲಿ ಮಾತನಾಡುತ್ತಿದ್ದರು.‘ಎ ಶಾಮ್ ಮಸ್ತಾನಿ’ ಅನ್ನುವ ‘ಪಕೋಡಾ ಟೇಲ್ಸ್’ ಎರಡನೇ ಕಾರ್ಯಕ್ರಮವನ್ನು ಸಂಗೀತ ದಿಗ್ಗಜ ರಹೆಮಾನ್ ಅವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಬದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಮಾತಾಡುತ್ತಿದ್ದರು. ಸಮಾರಂಭದಲ್ಲಿ ಮಂಗಳೂರಿನ ಕೊಳಲುವಾದಕ ವರುಣ್ ರಾವ್ ಅವರು ಎ ಆರ್ ರೆಹಮಾನ್ ಅವರ ಜನಪ್ರಿಯ ಗೀತೆಗಳನ್ನು ನುಡಿಸಿ ನೆರೆದಿದ್ದ ಸಂಗೀತ ಪ್ರಿಯರನ್ನು ರಂಜಿಸಿದರು.


ಈ ಸಂಧರ್ಭದಲ್ಲಿ ಬಿವೋಕ್ ಡಿಜಿಟಲ್ ಮೀಡಿಯಾ & ಫಿಲ್ಮಂ ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆಂಟೋನಿ ಹಾಗೂ ಮುರಾರಿ ತಾವೇ ರಚಿಸಿದ ಸಾಲಿಗೆ,ಸಂಗೀತ ಸಂಯೋಜಿಸಿ ಹಾಡಿದರು. ಕಾರ್ಯಕ್ರಮದಲ್ಲಿ ಬಿವೋಕ್ ವಿಭಾಗದ ಪ್ರಾಧ್ಯಪಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *