Header Ads
Header Ads
Breaking News

ಭಾರತೀಯ ಮೂಲದ ವಿದ್ಯಾರ್ಥಿ ಟ್ಯಾಕ್ಸಿ ಡ್ರಯ್ವರ್, ಆಸ್ಟ್ರೇಲಿಯಾದಲ್ಲಿ ಹೊಡೆತಕ್ಕೆ ಸಿಕ್ಕ ಪ್ರದೀಪ್ ಸಿಂಗ್

ಆಸ್ಟ್ರೇಲಿಯಾದಲ್ಲಿ ಭಾರತೀಯರ ವಿರುದ್ಧ ದೌರ್ಜನ್ಯ ಮತ್ತು ಜನಾಂಗೀಯ ನಿಂದನೆಯಂಥ ಪ್ರಕರಣಗಳು ಪದೇ ಪದೆ ಸುದ್ದಿಯಾಗುತ್ತಿವೆ. ನಿನ್ನೆಯೂ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನನ್ನು ಪ್ರಯಾಣಿಕರು ಪ್ರಜ್ಞೆ ತಪ್ಪುವ ರೀತಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾದಲ್ಲಿ ಹಾಸ್ಪಿಟಾಲಿಟಿ ವ್ಯಾಸಂಗ ಮಾಡುತ್ತಿರುವ ಪ್ರದೀಪ್ ಸಿಂಗ್, ರಾತ್ರಿ ವೇಳೆ ಟ್ಯಾಕ್ಸಿ ಚಾಲನೆ ಮಾಡುತ್ತಾರೆ. ಇಲ್ಲಿಯ ತಾಸ್ಮಾನಿಯಾದಲ್ಲಿ ಟಾಕ್ಸಿ ಚಾಲನೆ ಮಾಡುತ್ತಿದ್ದ ವೇಳೆ ಟ್ಯಾಕ್ಸಿಯಲ್ಲಿದ್ದ ಒಬ್ಬ ಮಹಿಳೆ ಸೇರಿ ಇಬ್ಬರು ಪ್ರಯಾಣಿಕರು ಅವರನ್ನು ಥಳಿಸಿದ್ದಾರೆ ಮತ್ತು ಜನಾಂಗೀಯವಾಗಿ ನಿಂದಿಸಿದ್ದಾರೆ. ಟಾಕ್ಸಿಯಲ್ಲಿದ್ದ ಮಹಿಳೆ ವಾಂತಿ ಮಾಡಿಕೊಳ್ಳುಧವವಳಿದ್ದಳು. ನಾನು ಆಕೆಗೆ ಕಾರಿನಿಂದ ಹೊರಗಿಳಿದು ಮಾಡುವಂತೆ ಹೇಳಿದೆ. ಕಾರಿನಲ್ಲಿ ವಾಂತಿ ಮಾಡಿದರೆ ಸ್ವತ್ಛತೆ ಶುಲ್ಕವನ್ನು ವಿಧಿಸುವುದಾಗಿ ಹೇಳಿದೆ. ಅಷ್ಟಕ್ಕೇ ಅವರು ನನ್ನ ವಿರುದ್ಧ ಅಸಭ್ಯವಾಗಿ ಜನಾಂಗೀಯ ನಿಂದನೆ ಮಾಡಿದರು. ನನ್ನನ್ನು ಮನಬಂದಂತೆ ಥಳಿಸಿದರು ಎಂದು ಪ್ರದೀಪ್ ಸಿಂಗ್ ಹೇಳಿದ್ದಾರೆ.

Related posts

Leave a Reply