Header Ads
Breaking News

ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ. ಟ್ರಂಪ್ ಪ್ರವಾಸ ಗುಜರಾತ್‌ನಿಂದ ಆರಂಭವಾಗುತ್ತಿದೆ ಭಾರತ ಮತ್ತು ಅಮೇರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ ಎಂದು ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಭಾರತಕ್ಕೆ ಎಲ್ಲಾ ನೆರವು ಅಮೇರಿಕಾದಿಂದ ಸಿಗಲಿದೆ ವಿಪಕ್ಷಗಳು ವಿರೋಧಕ್ಕೆ ವಿರೋಧ ಮಾಡುತ್ತಿದೆ ಬಿಜೆಪಿಯ ಎಲ್ಲವನ್ನು ಟೀಕೆ ಮಾಡೂದು ಕಾಂಗ್ರೆಸ್ ಜಾಯಮಾನ ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್‌ಗೆ ಇಲ್ಲ ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು ಕಾಂಗ್ರೆಸ್ ಆವಾಗ ಕಣ್ಮುಚ್ಚಿ ಕೂತಿದ್ಯಾಕೆ ಎಂದು ಪ್ರಶ್ನಿಸಿದ್ದರು. ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ವಿಚಾರ ನಾವು ಹಾಲಿನ ಜೊತೆ ಸಕ್ಕರೆ ತರ ಇದ್ದೇವೆ. ಭಿನ್ನಮತ ನಮ್ಮಲ್ಲಿ ಇಲ್ಲ ಭಿನ್ನಮತ ಮಾಧ್ಯಮದಲ್ಲಿ ಇದ್ಯಾ ಅಂತ ನನಗೆ ಸಂಶಯ ಬಿಜೆಪಿಯಲ್ಲಿ ಮೂಲ ಬಂದವರು, ಹೋದವರಿಲ್ಲ ಬಂದವರೆಲ್ಲರೂ ನಮ್ಮಜೊತೆ ಒಂದಾಗಿದ್ದಾರೆ ಎಂದರು.

Related posts

Leave a Reply

Your email address will not be published. Required fields are marked *