Header Ads
Header Ads
Breaking News

ಭಾರತ್ ಗ್ರೂಪ್ ಆಫ್ ಕಂಪನೀಸ್‍ನ ನಿರ್ದೇಶಕ ಅನಂತ್ ಜಿ. ಪೈ ಹೃದಯಾಘಾತದಿಂದ ನಿಧನ

ದೇಶಾದ್ಯಂತ ಉದ್ಯಮದಲ್ಲಿ ತನ್ನ ಛಾಪನ್ನು ಮೂಡಿಸಿರುವ ಭಾರತ್ ಗ್ರೂಪ್ ಆಫ್ ಕಂಪನೀಸ್‍ನ ಕಾರ್ಯನಿರ್ವಾಹಕ ನಿರ್ದೇಶಕ  ಅನಂತ್ ಜಿ. ಪೈ ಅವರು ಇಹಲೋಕ ತ್ಯಜಿಸಿದ್ದಾರೆ. ಉದ್ಯಮ ಸಂಬಂಧಿ ಸೆಮಿನಾರ್‍ವೊಂದರಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶದ ಇಂದೋರ್‍ಗೆ ತೆರಳಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಭಾರತ್ ಗ್ರೂಪ್‍ನ ಸಂಸ್ಥಾಪಕ ಬಿ. ಮಂಜುನಾಥ್ ಪೈಗಳ ಮೊಮ್ಮಗ, ಸುಮಾರು 46 ವರ್ಷ ಪ್ರಾಯದ ಅನಂತ್ ಜಿ ಪೈ ಅವರು ಭಾರತ್ ಸಮೂಹದ ಉದ್ಯಮವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಪಾತ್ರವನ್ನು ನಿರ್ವಹಿಸಿದ್ದರು. ಉದ್ಯಮಕ್ಕೆ ಸಂಬಂಧಪಟ್ಟಹಾಗೆ ಸೆಮಿನಾರ್ ಒಂದರಲ್ಲಿ ಪಾಲ್ಗೊಳ್ಳಲು ಇಂದೋರ್‍ಗೆ ತೆರಳಿ ಅಲ್ಲಿನ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಅಲ್ಲಿ ನಿನ್ನೆ ಮಧ್ಯರಾತ್ರಿ ವೇಳೆ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಸುಮಾ ಅನಂತ್ ನಾಯಕ್, ಪುತ್ರಿ ಅನ್ವಿತಾ, ಸಹೋದರ ಆನಂದ್ ಜಿ ಪೈ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಭಾರತ್ ಗ್ರೂಪ್‍ನ ಮಾಜಿ ಆಡಳಿತ ನಿರ್ದೇಶಕ ಬಿ. ಗಣಪತಿ ಪೈ ಮತ್ತು ಗೀತಾ ಪೈ ದಂಪತಿಯ ಪುತ್ರನಾಗಿರುವ ಅನಂತ್ ಜಿ ಪೈಯವರು 1973ರ ಎಪ್ರಿಲ್ 6ರಂದು ಜನಿಸಿದ ಅನಂತ್ ಜಿ ಪೈಯವರು 1994ರಲ್ಲಿ ಭಾರತ್ ಗ್ರೂಪ್ ಆಫ್ ಕಂಪನೀಸ್‍ನಲ್ಲಿ ಕೆರಿಯರ್ ಆರಂಭಿಸಿದ್ದರು. ಪ್ರಸ್ತುತ ಮಾರ್ಕೆಟೆಂಗ್ ಮತ್ತು ಫೈನಾನ್ಸ್ ಡಿಪಾರ್ಟ್‍ಮೆಂಟ್‍ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತ್ ಬೀಡಿ ವಕ್ರ್ಸ್, ಭಾರತ್ ಆಟೋಕಾರ್ಸ್, ಭಾರತ್ ಬುಕ್ ಮಾಕ್ರ್ಸ್, ಭಾರತ್ ಪ್ರಿಂಟರ್ಸ್ ಮತ್ತು ಕಾರ್ಕಳ ಇನ್‍ವೆಸ್ಟ್‍ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಭಾರತ್ ಬಿಲ್ಡರ್ಸ್ ಮತ್ತು ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಮುಂದಾಲೋಚನೆ, ದೂರದೃಷ್ಟಿತ್ವದ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಮಂಗಳೂರಿನಲ್ಲಿ ಭಾರತ್ ಮಾಲ್ ಮೂಲಕ ಆಧುನಿಕ ಶಾಪಿಂಗ್ ಮಾಲ್ ನಿರ್ಮಿಸಿದ ಹೆಗ್ಗಳಿಕೆಯೂ ಇವರದ್ದು.

ಉದ್ಯಮದ ಜೊತೆಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಅನಂತ್ ಜಿ. ಪ್ರಭು ಅವರು ಬಿ. ಮಂಜುನಾಥ ಪೈ ಕಲ್ಚರಲ್ ಫೌಂಡೇಶನ್ ಆಂಡ್ ಮಂಜುನಾಥ್ ದಾಮೋದರ್ ಪೈ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿಯಾಗಿದ್ದರು. ಕಾರ್ಕಳ ಭುವನೇಂದ್ರ ಕಾಲೇಜು ಟ್ರಸ್ಟ್‍ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕಾರ್ಕಳದ ವೆಂಕಟರಮಣ ದೇವಾಲಯದ ಜೀರ್ಣೋದ್ಧಾರದಲ್ಲಿ ಸಾಕಷ್ಟು ಶ್ರಮಿಸಿದ್ದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related posts

Leave a Reply

Your email address will not be published. Required fields are marked *