Header Ads
Breaking News

ಭಾರತ ದೇಶ ಆಧ್ಯಾತ್ಮಿಕ ಪರಂಪರೆಯಿಂದ ಕೂಡಿದೆ. ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ಅಭಿಪ್ರಾಯ.

ನಮ್ಮ ತುಳು ನಾಡಿನ ಆಚಾರ ವಿಚಾರ ಉಳಿಯಲು ನಾವು ಇಂತಹ ಕಾರ್‍ಯಕ್ರಮಗಳನ್ನು ನಡೆಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ತುಳು ಭಾಷೆ ಸುಸಂಸ್ಕೃತ ಭಾಷೆಯಾಗಿದ್ದು ಈ ಆಟಿ ತಿಂಗಳಿಗೆ ವೈಜ್ಞಾನಿಕ ಮಹತ್ವ ಇದೆ ಆದ್ದುದರಿಂದ ಭಾರತ ದೇಶದ ಪರಂಪರೆಯು ಆಧ್ಯಾತ್ಮಿಕ ಪರಂಪರೆಯಾಗಿ ಮುಂದುವರೆಯುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ನುಡಿದರು.ಅವರು ಉಪ್ಪಳಿಗೆ ಮೀನಾಕ್ಷಿ ಮಂಜುನಾಥ ರವರ ಗದ್ದೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ಶ್ರೀವಿಷ್ಣುಮೂರ್ತಿ ಯುವಕ ಮಂಡಲ ಉಪ್ಪಳಿಗೆ ಇದರ ಸಹಯೋಗದೊಂದಿಗೆ ನಡೆದ ವಿದ್ಯಾರ್ಥಿಗಳಿಗೆ ಕೃಷಿ ಬೇಸಾಯ ಪದ್ದತಿ ಪ್ರಾತ್ಯಕ್ಷಿಕೆ ಮತ್ತು ಕೆಸರು ಗದ್ದೆ ಕ್ರೀಡಾಕೂಟದ ಸಭಾ ಕಾರ್‍ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಾರ್‍ಯಕ್ರಮಕ್ಕೆ ಶುಭಹಾರೈಸಿದರು.ಕರ್ನಾಟಕ ತುಳು ಅಕಾಡೆಮಿಯ ರಿಜಿಸ್ಟಾರ್ ಚಂದ್ರಹಾಸ ರೈ ಮಾತನಾಡಿ ತುಳು ಸಂಸ್ಕೃತಿ ಭಾಷೆ ನಂಬಿಕೆ, ಇಟ್ಟುಕೊಂಡು ಇಂತಹ ಆಚರಣೆಯನ್ನು ಮಾಡಲಾಗುತ್ತಿದೆ. ಮಣ್ಣಿನೊಂದಿಗೆ ತುಳುವಿಗೆ ಇರುವ ಸಂಬಂಧವನ್ನು ಇಂತಹ ಆಟಗಳಿಂದ ಉಳಿಸಿಕೊಂಡಿದೆ. ತುಳು ಭಾಷೆಗೆ ಒಂದ ಉತ್ತಮ ಸ್ಥಾನವನ್ನು ಸರ್ಕಾರ ನೀಡಿದೆ ಎಂದು ಹೇಳಿ ಕಾರ್‍ಯಕ್ರಮಕ್ಕೆ ಶುಭಹಾರೈಸಿದರು.ಪುರುಷರಿಗೆ ವಾಲಿಬಾಲ್ , ಹಗ್ಗಜಗ್ಗಾಟ, ಮುಳಿಯ ನಿಧಿ ಶೋಧಕ, ಮಹಿಳೆಯರಿಗೆ ಹಗ್ಗಜಗ್ಗಾಟ, ತ್ರೊಬಾಲ್ , ಮಡಕೆ ಹೊಡೆಯುವುದು, 100 ಮೀಟರ್ ಓಟ , ಬಾಟ್ಲಿಯಲ್ಲಿ ನೀರು ತುಂಬಿಸುವುದು. ವಿದ್ಯಾರ್ಥಿಗಳಿಗೆ ಕೃಷಿ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಮತ್ತು ನೂರು ಮೀಟರ್ ಓಟ, ಮಡಕೆ ಹೊಡೆಯುವುದು , ಗೋಣಿಚೀಲ ಓಟ , ಮಕ್ಕಳ ಕಂಬಳ , ಹಾಳೆ ಓಟ ಮುಂತಾದ ಕ್ರೀಡೆಗಳನ್ನು ನಡೆಸಲಾಯಿತು.ವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಅಧ್ಯಕ್ಷ ಚೇತನ್ ಉಪ್ಪಳಿಗೆ, ಕೈಕಾರ ಸರ್ವಶಕ್ತಿ ಯುವಕ ಮಂಡಲದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ , ದೈಹಿಕ ಶಿಕ್ಷಕ ದಯಾನಂದ ರೈ ಕೊರ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply