Breaking News

ಭಾರತ ನಿರ್ಮಿತ ಮೊದಲ ದ್ರವ ಇಂಧನ ಕ್ಷಿಪಣಿ, ಬಾಲಸೋರ್‌ನಲ್ಲಿ ಯಶಸ್ವಿ ಉಡಾವಣೆ

ಸ್ವದೇಶಿ ನಿರ್ಮಿತ ಪೃಥ್ವಿ- ೨ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಶುಕ್ರವಾರ ಒಡಿಶಾದ ಬಾಲಸೋರ್ ಇಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ನೆಲದಿಂದ ನೆಲಕ್ಕೆ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಕ್ಷಿಪಣಿಯನ್ನು ಬೆಳಿಗ್ಗೆ ೯.೫೦ಕ್ಕೆ ಚಾಂಡಿಪುರದ ಸಮಗ್ರ ಪರೀಕ್ಷಾ ವಲಯದಲ್ಲಿರುವ ಐಟಿ‌ಆರ್ ಉಡಾವಣಾ ಸಂಕೀರ್ಣ ೩ರಿಂದ ಪರೀಕ್ಷೆಗೆ ಒಳಪಡಿಸಲಾಯಿತು.
ನಿಖರವಾಗಿ ಗುರಿಯನ್ನು ತಲುಪಬಲ್ಲ ಅತ್ಯಾಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ. ಡಿ‌ಆರ್ಡಿ‌ಒ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಯಿತು. ಇಂಟಿಗ್ರೇಟೆಡ್ ಗೈಡೆಡ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿ ಡಿ‌ಆರ್ಡಿ‌ಒ ಅಭಿವೃದ್ಧಿಪಡಿಸಿರುವ ದ್ರವ ಇಂಧನದ ಮೊದಲ ಕ್ಷಿಪಣಿ ಇದಾಗಿದೆ.

Related posts

Leave a Reply