Header Ads
Header Ads
Breaking News

ಭಾರತ ಬಾಂಗ್ಲಾದೇಶ ತ್ರೋಬಾಲ್ ಸರಣಿ, ಪುರುಷ, ಮಹಿಳೆಯರಲ್ಲಿ ಭಾರತ ಚಾಂಪಿಯನ್

ಭಾರತದ ಪುರುಷರ ಮತ್ತು ಮಹಿಳೆಯರ ತಂಡದವರು ಬಾಂಗ್ಲಾದೇಶ ವಿರುದ್ಧದ ಅಂತರರಾಷ್ಟ್ರೀಯ ಥ್ರೋಬಾಲ್ ಸರಣಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
ಪುರುಷರ ತಂಡದವರು ೨-೦ಯಲ್ಲಿ ಗೆದ್ದರೆ, ಮಹಿಳೆಯರ ತಂಡವೂ ಇಷ್ಟೇ ಅಂತರದಿಂದ ಆತಿಥೇಯ ಬಾಂಗ್ಲಾ ತಂಡವನ್ನು ಮಣಿಸಿದೆ. ಮಹಿಳೆಯರ ಮೊದಲ ಪಂದ್ಯದಲ್ಲಿ ಭಾರತ ೨೫-೧೮, ೨೫-೨೨, ೨೫-೧೫ರಲ್ಲಿ ಮತ್ತು ಎರಡನೇ ಪಂದ್ಯದಲ್ಲಿ ೨೫-೨೧, ೨೭-೨೫, ೨೫-೧೯ರಲ್ಲಿ ಆತಿಥೇಯರನ್ನು ಮಣಿಸಿತು. ಪುರುಷರ ವಿಭಾಗದ ಎರಡನೇ ಪಂದ್ಯದಲ್ಲಿ ಭಾರತ ೨೫-೧೦, ೨೫-೧೭, ೨೦-೨೫, ೨೫-೨೩ರಲ್ಲಿ ಬಾಂಗ್ಲಾ ವಿರುದ್ಧ ಗೆದ್ದಿತು. ಮೊದಲ ಪಂದ್ಯದಲ್ಲಿಯೂ ಪ್ರವಾಸಿ ಪಡೆ ಸುಲಭವಾಗಿ ಎದುರಾಳಿಗಳನ್ನು ಮಣಿಸಿತ್ತು. ಕರ್ನಾಟಕದ ಪ್ರಿಯಾಂಕ, ಐಶ್ವರ್ಯ, ಜಿ. ಪಿ. ಕೃಪಾ, ಸಂಪೂರ್ಣ ಹೆಗ್ಡೆ ಮತ್ತು ರವಿಕುಮಾರ್ ಅವರು ಗಮನ ಸೆಳೆದರು.

Related posts

Leave a Reply