Breaking News

ಭಾರಿ ಮಳೆ ಗಾಳಿಗೆ ಮನೆಗಳ ಮೇಲೆ ಉರುಳಿದ ಮರಗಳು ಧರೆಗುರುಳಿದ ಅಡಕೆ, ತೆಂಗು ಮರಗಳು ವಿಟ್ಲದ ಪೆರುವಾಯಿ ಗ್ರಾಮದಲ್ಲಿ ಘಟನೆ

 
ವಿಟ್ಲ: ಬಾರೀ ಮಳೆಗಾಳಿಗೆ ಹಲವು ಮನೆಗಳ ಏಳುಗಿಂತಲೂ ಅಧಿಕ ಮನೆಗಳ ಮರಗಳು ಹಾಗೂ ಅಧಿಕ ಅಡಿಕೆ ಹಾಗೂ ತೆಂಗು ಮರಗಳ ಉರುಳಿ ಬಿದ್ದ ಪರಿಣಾಮ ಹಾನಿ ಸಂಭವಿಸಿದ ಘಟನೆ ಪೆರುವಾಯಿ ಗ್ರಾಮದಲ್ಲಿ ನಡೆದಿದೆ.

ಪೆರುವಾಯಿ ಗ್ರಾಮದ ಮುಕ್ಡಾಪು ಸುತ್ತಮುತ್ತಲಿನ ನಿವಾಸಿಗಳ ಐತ ಕೊರಗ, ಚನಿಯ ಕೊರಗ, ದೇರಣ್ಣ ಶೆಟ್ಟಿ, ಎಲಿಝ್ ಡಿಸೋಜ, ಲಿಯೋ ಡಿಸೋಜ, ರೀತಾ ಡಿಸೋಜ ಮೊದಲಾದ ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿದೆ. ಘಟನೆಯಲ್ಲಿ ಮನೆಯ ಹಂಚು, ಪಕ್ಕಾಸು, ಶೀಟುಗಳು ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ.
೩೦೦ಕ್ಕಿಂತಲೂ ಅಧಿಕ ಅಡಿಕೆ ಮರಗಳು ಹಾಗೂ ತೆಂಗು ಮರಗಳು ನೆಲಕಚ್ಚಿದೆ. ಇನ್ನೂ ಅನೇಕ ಬೆಲೆಗಳಿಗೆ ಹಾನಿ ಸಂಭವಿಸಿದೆ ಎಂದು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ ಅವರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಹಾಗೂ ಸ್ಥಳೀಯರಾದ ಸುರೇಶ್‌ಗುತ್ತು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply