Header Ads
Header Ads
Breaking News

ಭಾವನಿನಾದ ಪೇಪರ್ ಕಟ್ಟಿಂಗ್ ಭಾವಚಿತ್ರಗಳು ಜ.5 ರಿಂದ ೮ರ ವರೆಗೆ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ

ಕಲಾವಿದ ಚಂದನ್ ಸುರೇಶ್ ಅವರ ಚಿತ್ರಕಲಾ ಪ್ರದರ್ಶನ ಭಾವನಿನಾದ ಪೇಪರ್ ಕಟ್ಟಿಂಗ್ ಭಾವಚಿತ್ರಗಳು ಜನವರಿ ೫ರಿಂದ ೮ರ ವರೆಗೆ ಬಳ್ಳಾಲ್ ಭಾಗ್ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಹ್ಯಾದ್ರಿ ಸಂಚಯ ಸಂಚಾಲಕರಾದ ದಿನೇಶ್ ಹೊಳ್ಳ ಮಾತನಾಡಿ, ಜನವರಿ 5 ರಂದು ಸಂಜೆ 5 ಗಂಟೆಗೆ ಕಲಾಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಕಲಾವಿಮರ್ಶಕರು, ನಿವೃತ್ತ ಪ್ರಾಂಶುಪಾಲರಾದ ಬೈಕಾಡಿ ಜನಾರ್ದನ ಆಚಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್, ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಕಲ್ಚರಲ್ ಟ್ರಸ್ಟ್‌ನ ಭ್ರಮರಿಶಿವಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ಚಂದನ್ ಸುರೇಶ್, ವಿಶ್ವಾಸ್ ಕೃಷ್ಣ ಉಪಸ್ಥಿತರಿದ್ದರು.

ವರದಿ: ಶರತ್

Related posts