Header Ads
Header Ads
Breaking News

ಭಾಷಣ ಮತ್ತು ಘೋಷಣೆಗಳಿಂದ ಯಾವುದೇ ಕಾರ್ಯ ಸಾಧ್ಯವಾಗದು. ಸಹಾಯ ಮತ್ತು ಸಹಕಾರ ನೀಡುವ ಧೋರಣೆ ರೂಪಿಸಿಕೊಳ್ಳಿ. ಮುಲ್ಕಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ಭಾಷಣ ಮತ್ತು ಘೋಷಣೆಗಳಿಂದ ಯಾವುದೇ ಕಾರ್ಯ ಸಾಧ್ಯವಾಗದು ತಳಮಟ್ಟದಲ್ಲಿ ಸಹಾಯ ಸಹಕಾರ ನೀಡುವ ಧೋರಣೆಯನ್ನು ಸಮಾಜದ ಸಿರಿವಂತ ವರ್ಗ ರೂಪಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ಮೂಲ್ಕಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಗರದ ಶಾಸಕ ಹಾಲಪ್ಪ, ರಾಜ್ಯ ವಿರೋಧ ಪಕ್ಷ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್, ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ವಹಿಸಿದ್ದರು.  ಈ ಸಂದರ್ಭ ಸಮಾಜದ ಜನಪ್ರತಿನಿಧಿಗಳಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಸಾಗರ ಶಾಸಕ ಹಾಲಪ್ಪ, ವಿಧಾನ ಪರಿಷತ್ ಸದಸ್ಯತ ಹರೀಶ್ ಕುಮಾರ್ ಬೆಳ್ತಂಗಡಿ ಇವರನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಸಾಯಿರಾಂ, ಕಾರ್ಯದರ್ಶಿ ಪದ್ಮರಾಜ್, ಮುಂಬೈ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ. ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply