Header Ads
Header Ads
Breaking News

ಭಿನ್ನ ಚೇತನರ ಪ್ರಮಾಣ ಪತ್ರಕ್ಕಾಗಿ ಪ್ರತ್ಯೇಕ ಶಿಬಿರ

ಭಿನ್ನ ಚೇತನರಿಗಾಗಿ ವಿಶೇಷವಾದ ಶಿಬಿರ ಮಂಜೇಶ್ವರ ಬ್ಲಾಕ್ ಪಂಚಾಯತ್ ಆವರಣದಲ್ಲಿ ಜರುಗಿತು. ಈ ಶಿಬಿರದಲ್ಲಿ ಮಂಜೇಶ್ವರ ಮತ್ತು ವರ್ಕಾಡಿ ಗ್ರಾಮ ಪಂಚಾಯತ್‌ನ ಸುಮಾರು 250 ಮಂದಿ ಭಿನ್ನ ಚೇತನರು ಪಾಲ್ಗೊಂಡಿದ್ದರು.ಆನ್ ಲೈನಿನಲ್ಲಿ ಪ್ರಮಾಣ ಪತ್ರಕ್ಕಾಗಿ ಕಳೆದ ಒಂದು ವರ್ಷದಿಂದ ಭಿನ್ನ ಚೇತನರು ಪರದಾಡುತಿದ್ದರೂ ಯಾವುದೇ ಫಲ ಕಾಣದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತದ ಮುತುವರ್ಜಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರ ಪ್ರಯತ್ನದಿಂದ ಭಿನ್ನ ಚೇತನರಿಗಾಗಿ ವಿಶೇಷವಾದ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಪಾಲ್ಗೊಂಡ ಭಿನ್ನ ಚೇತನರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅವರಿಗೆ ಪ್ರಮಾಣ ಪತ್ರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

Related posts

Leave a Reply