Header Ads
Header Ads
Breaking News

ಭಿನ್ನ ಚೇತನ ಮಕ್ಕಳಿಗಾಗಿ ಪಜಿಲದಲ್ಲಿ ಸ್ಪೆಷಲ್ ಸ್ಕೂಲ್. ಬದಿಯಡ್ಕದ ಪಜಿಲದಲ್ಲಿ ಆರಂಭಗೊಂಡ ಶಾಲೆ. ಶಾಸಕ ಎನ್.ಎ. ನೆಲ್ಲಿಕುನ್ನು ಅವರಿಂದ ಉದ್ಘಾಟನೆ.

ಮಂಜೇಶ್ವರ : ವಿಕಲಚೇತನ ಮಕ್ಕಳಿಗಾಗಿ ಬದಿಯಡ್ಕದ ಪಜಿಲದಲ್ಲಿ ಕರ್ಮಲಿತ್ತಾ ಸಿಸ್ಟರ್ಸ್ ಎಂಬ ಕಾರ್ಮಲ್ ಸ್ಪೆಷಲ್ ಸ್ಕೂಲ್‌ನ ಉದ್ಘಾಟನಾ ಸಮಾರಂಭ ನಡೆಯಿತು.ಕಾಸರಗೋಡು ಶಾಸಕರಾದ ಎನ್.ಎ ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಲಶ್ಶೇರಿ ವಲಯದ ಫಾದರ್ ಜನರಲ್ ಮೋ.ಜೋರ್ಜ್ ಎಳುಕುನ್ನೇಲ್ ಆಶೀರ್ವಚನವನ್ನು ನೀಡಿದರು.,


ಬದಿಯಡ್ಕ ಮಾರ್ಥೋಮ ಕಾಲೇಜಿನ ಡಯರೆಕ್ಟರ್ ಮಾಥ್ಯೂ ಸಾಮುವೆಲ್, ಬದಿಯಡ್ಕ ಸೆಂಟ್ ಮೇರಿಸ್ ಚರ್ಚ್‌ನ ಫಾದರ್ ಫಾ.ಜೋಸಪ್ ಈನಾಚ್ಚೇರಿ ಮೊದಲಾದ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಶ್ರೀಕಾಂತ್ ವಹಿಸಿದರು.ತಲಶ್ಶೇರಿ ಪ್ರೊವಿನ್‌ಶ್ಯಲ್ ಸುಪೀರಿಯರಾದ ಸಿ.ಸಿನೋಬಿ ಸಿ.ಎಂ.ಸಿ, ತೆರೇಸ್ ಫ್ರಾನ್ಸಿಸ್ ಉಪಸ್ಥಿತರಿದ್ದರು.

Related posts

Leave a Reply