Header Ads
Header Ads
Breaking News

ಭೀಕರ ರಾಜಕೀಯಕ್ಕೆದುರಾಗಿ ಒಂದಾಗೋಣ, ಎಸ್‌ಡಿಪಿ‌ಐಯಿಂದ ಅಭಿಯಾನಕ್ಕೆ ಚಾಲನೆ

ಭೀಕರ ರಾಜಕೀಯಕ್ಕೆದುರಾಗಿ ಒಗ್ಗಟ್ಟಾಗೋಣ ಎಂಬ ಘೋಷಣೆಯೊಂದಿಗೆ ರಾಷ್ಟ್ರ ವ್ಯಾಪಿಯಾಗಿ ನಡೆಸಲ್ಪಡುವ ಅಭಿಯಾನ ಮಂಜೇಶ್ವರ ಉಪ್ಪಳದಲ್ಲಿ ಚಾಲನೆ ಕಂಡಿತು.
ಇದರ ಅಂಗವಾಗಿ ಮಂಜೇಶ್ವರ ಮಂಡಲ ಅಧ್ಯಕ್ಷ ಇಕ್ಬಾಲ್ ಹೊಸಂಗಡಿಯವರ ನೇತೃತ್ವದಲ್ಲಿ ನಡೆಯುತ್ತಿರುವ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ ದೊರಕಿತು. ಉಪ್ಪಳ ನಯಾ ಬಜಾರಿನಲ್ಲಿ ಜಾಥಾ ನಾಯಕ ಇಕ್ಬಾಲ್‌ರವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಎನ್. ಯು. ಅಬ್ದುಲ್ ಸಲಾಂ ದ್ವಜವನ್ನು ಹಸ್ತಾಂತರಿಸಿ ಉದ್ಘಾಟಿಸಿದರು. ಈ ಸಂದರ್ಭ ನೇತರರಾದ ಪಿ. ಕೆ. ಉಸ್ಮಾನ್, ಹನೀಫ್ ಖಾನ್ ಕೊಟ್ಟಾಜೆ, ಆನಂದ ಮಿತ್ತಬಾಗಿಲು, ಅಬ್ದುಲ್ ಹಮೀದ್ ಹೊಸಂಗಡಿ, ಮಜೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

Leave a Reply