Header Ads
Header Ads
Header Ads
Breaking News

ಭೀಕ್ಷಾಟನೆ ಷಡ್ಯಂತ್ರವನ್ನು ಬೇರು ಸಹಿತ ನಿರ್ಮೂಲನೆ ಸಾಧ್ಯ ಮಕ್ಕಳ ಸಂಸತ್ ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ

 
ಕುಂದಾಪುರ: ಭಿಕ್ಷಾಟನೆ ಹಿಂದಿರುವ ಷಡ್ಯಂತ್ರವನ್ನು ಭೇದಿಸಿದರೆ ಖಂಡಿತವಾಗಿಯೂ ಭಿಕ್ಷಾಟನೆಯನ್ನು ಬೇರು ಸಹಿತ ನಿರ್ಮೂಲನೆ ಸಾಧ್ಯ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಭಿಕ್ಷಾಟಣೆ ಎನ್ನುವುದು ಸಾಮಾಜಿಕ ಪಿಡುಗು ಈ ಹಿನ್ನೆಲೆ, ಸರ್ಕಾರ ಭಿಕ್ಷಾಟನೆ ನಡೆಸುವುದು ಶಿಕ್ಷಾರ್ಹ ಅಪರಾಧ ಎಂದು ಭಿಕ್ಷಾಟನೆಯಲ್ಲಿ ತೊಡಗಿರುವರಿಗೆ ಪುನರ್‌ವಸತಿ ಕೇಂದ್ರಗಳನ್ನ ಕೂಡ ಸೃಷ್ಟಿಸಿದೆ. ಆದರೆ ಇದೊಂದು ಮಾಫಿಯಾ ಆಗಿದೆ. ಕೆಲವು ಕಡೆ ಮಕ್ಕಳೊಂದಿಗೆ ಭಿಕ್ಷಾಟಣೆ ನಡೆಸುತ್ತಾರೆ. ಸರಿಯಾಗಿ ಪರಿಶೀಲಿಸಿದರೆ ಆ ಮಕ್ಕಳು ಅವರ ಮಕ್ಕಳೇ ಆಗಿರುವುದಿಲ್ಲ ೫೦೦ ರು. ಬಾಡಿಗೆಗೆ ಆ ಮಕ್ಕಳನ್ನು ತೆಗೆದುಕೊಂಡು ಬಂದು ಭಿಕ್ಷಾಟಣೆ ಮಾಡುತ್ತಾರೆ. ಇಂತಹ ವ್ಯವಸ್ಥಿತ ಷಡ್ಯಂತ್ರಗಳನ್ನ ಭೇದಿಸಿದರೆ ಖಂಡಿತವಾಗಿ ಭಿಕ್ಷಾಟಣೆ ನಿರ್ಮೂಲನೆ ಸಾಧ್ಯ ಎಂದರು.

ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಏನು ಮಾಡಬೇಕೆಂದು ವಿದ್ಯಾರ್ಥಿಯೋರ್ವ ಪ್ರಶ್ನಿಸಿದಾಗ ಉತ್ತರಿಸಿದ ಶ್ರೀನಿವಾಸ ಪೂಜಾರಿ, ದೇಶದಲ್ಲಿ ಅಸುರಕ್ಷತೆ ಹುಟ್ಟಲು ಕಾರಣ ಭಯೋತ್ಪಾದನೆ ಮೊದಲಾದ ಸಮಾಜ ಘಾತುಕ ಕಾರ್ಯಗಳಿಂದ. ಪ್ರತಿಯೋಬ್ಬನಿಗೂ ತಾನು ಹುಟ್ಟಿದ ದೇಶದ ಬಗ್ಗೆ ಅಭಿಮಾನ, ಪ್ರೇಮವಿರಬೇಕು. ದೇಶದಲ್ಲಿ ರಾಷ್ಟ್ರಪ್ರೇಮದ ಕುಡಿಗಳು ಹುಟ್ಟಬೇಕು ಆಗ ಮಾತ್ರ ದೇಶದಲ್ಲಿ ಸುರಕ್ಷತೆ ಹುಟ್ಟಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ವಿಷಯಕ್ಕೊಬ್ಬರು ಅಥವಾ ತರಗತಿಗೊಬ್ಬರು ಶಿಕ್ಷಕರನ್ನು ನೇಮಕ ಏಕೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಯೊರ್ವ ವಿಧಾನ ಪರಿಷತ್ ಶಾಸಕರ ಗಮನ ಸೆಳೆದಾಗ, ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಈಗ ದಿನದಿಂದ ದಿನಕ್ಕೆ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಕುಂಠಿತವಾಗುತ್ತಿದೆ. ಈ ಹಿನ್ನೆಲೆ ಶಿಕ್ಷಕರ ಪ್ರಮಾಣ ಕೂಡ ಕುಸಿತಗೊಳ್ಳುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆ ಯಾರಿಗೂ ಬೇಡ.. ಆದರೆ ಸರ್ಕಾರಿ ಕೆಲಸ ಮಾತ್ರ ಎಲ್ಲರಿಗೂ ಬೇಕಾಗಿದೆ. ಅದಕ್ಕೂ ಕಾರಣಗಳಿವೆ. ಆದರೂ ಈ ಪರಿಸ್ಥಿತಿಯನ್ನ ಬದಲಾಯಿಸಬೇಕಾಗಿದೆ. ಸರ್ಕಾರಿ ಕೆಲಸದಂತೆ ಸರ್ಕಾರಿ ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೂ ಜನರು ಬೆಲೆ ನೀಡುವಂತಾಗಬೇಕು ಎಂದರು.

ನಂತರ ಇಲಾಖಾ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ೧೦ ವಿದ್ಯಾರ್ಥಿಗಳನ್ನ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಂಸತ್‌ಗೆ ಆಯ್ಕೆ ಮಾಡಲಾಯಿತು.

Related posts

Leave a Reply