Header Ads
Header Ads
Header Ads
Breaking News

‘ಭೀಷ್ಮ ಪ್ರತಿಜ್ಞೆ ಮತ್ತು ಕನಕಾಂಗಿ ಕಲ್ಯಾಣ’ ಯಕ್ಷಗಾನ ಬಯಲಾಟ ವಿಟ್ಲದ ಭಗವತಿ ದೇವಸ್ಥಾನದ ರಂಗ ಮಂದಿರದಲ್ಲಿ ಕಾರ್ಯಕ್ರಮ

 

ವಿಟ್ಲ: ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯುತ್ತಿರುವ ಸಂಹ ಮಾಸ ಪ್ರಯುಕ್ತ ಯಕ್ಷ ಭಾರತ ಪ್ರತಿಷ್ಠಾನ ವಿಟ್ಲ ಇವರಿಂದ ಮೂರನೇ ವರ್ಷದ ಕಾಣಿಕೆಯಾಗಿ ‘ಭೀಷ್ಮ ಪ್ರತಿಜ್ಞೆ ಮತ್ತು ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಬಯಲಾಟ ದೇವಸ್ಥಾನದ ರಂಗ ಮಂದಿರದಲ್ಲಿ ನಡೆಯಿತು.
ಹಿರಿಯ ಹವ್ಯಾಸಿ ಕಲಾವಿದ ಗುಡ್ಡಪ್ಪ ಮಾಸ್ಟರ್ ಸೇರಾಜೆ, ಮಿಮಿಕ್ರಿ ಪಟು ನಾರಾಯಣಾಚಾರ್ಯ ಮುಳಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಒಬ್ಬ ಅಶಕ್ತ ರವಿನಾಯ್ಕ ಅವರಿಗೆ ಧನ ಸಹಾಯವನ್ನು ಯಕ್ಷ ಭಾರತ ವಿಟ್ಲ ಇದರ ವತಿಯಿಂದ ನೀಡಲಾಯಿತು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಅವರು ಮಾತನಾಡಿ ಯಕ್ಷ ಭಾರತ ಪ್ರತಿಷ್ಠಾನ ಕಳೆದ ಮೂರು ವರ್ಷಗಳಿಂದ ಇಲ್ಲಿ ಯಕ್ಷಗಾನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದಲ್ಲದೇ ಅನೇಕ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಸಂಪಾದನೆಯಲ್ಲಿ ಒಂದು ಭಾಗವನ್ನು ದೇವರಿಗೆ ಅರ್ಪಣೆ ಮಾಡುವ ಸಂಜೀವ ಪೂಜಾರಿ ಅವರು ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಯಕ್ಷ ಭಾರತ ಪ್ರತಿಷ್ಠಾನದ ಸಂಜಿವ ಪೂಜಾರಿ, ಭಗವತಿ ದೇವಸ್ಥಾನದ ಮೊಕ್ತೇಸರ ಕೇಶವ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ದಿನಕರ ಭಟ್, ಮೋನಪ್ಪ ಗುರುಸ್ವಾಮಿ ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply