Header Ads
Header Ads
Breaking News

ಭುಜಂಗ ಪಾರ್ಕ್‌ನಲ್ಲಿ ಬೆಳಗಿತು ವಿದ್ಯುತ್ ದೀಪ:ಇದು ವಿ4 ನ್ಯೂಸ್‌ನ ಬಿಗ್ ಇಂಪ್ಯಾಕ್ಟ್

ಉಡುಪಿಯ ಹೃದಯ ಭಾಗದಲ್ಲಿರುವ ಭುಜಂಗಪಾರ್ಕ್‌ನಲ್ಲಿ ಮತ್ತೆ ವಿದ್ಯುತ್ ದೀಪಗಳು ಬೆಳಗಿವೆ. ಕಳೆದ ಹಲವು ವಾರಗಳಿಂದ ಲೈಟ್ ವ್ಯವಸ್ಥೆಯಿಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದ್ದ ಭುಜಂಗ ಪಾರ್ಕ್ ಬಗ್ಗೆ ವಿ4 ನ್ಯುಸ್ ರಿಯಾಲಿಟಿ ಚೆಕ್ ಮಾಡಿತ್ತು. ಅನೇಕ ಅವ್ಯವಸ್ಥೆಯನ್ನು ಬಯಲಿಗೆ ಎಳೆದಿತ್ತು. ಇದೀಗ ಎಚ್ಚೆತ್ತ ಅಧಿಕಾರಿಗಳು ವಿದ್ಯುತ್ ದೀಪ ಅಳವಡಿಸಿದ್ದಾರೆ. ಇದು ವಿ4 ನ್ಯೂಸ್‌ನ ಬಿಗ್ ಇಂಪ್ಯಾಕ್ಟ್ ಸ್ಟೋರಿಯೂ ಹೌದು…

ಅಲ್ಲಲ್ಲಿ ಝಗಮಗಿಸುವ ವಿದ್ಯುತ್ ದೀಪಗಳು.. ಕತ್ತಲೆ ಕೋಣೆಯಂತಿದ್ದ ಭುಜಂಗ ಪಾರ್ಕ್ ಗೆ ಕೊನೆಗೂ ಬೆಳಕು ಹರೆದಿದೆ. ವಿಹಾರಾರ್ಥಿಗಳಲ್ಲಿ ಸಂತಸ ಮೂಡಿಸಿದೆ….  ಉಡುಪಿಯ ಹೃದಯ ಭಾಗದಲ್ಲಿರುವ ಭುಜಂಗ ಪಾರ್ಕ್ ನಲ್ಲಿ ಒಂದು ವಾರದಿಂದ ವಿದ್ಯುತ್ ದೀಪದ ವ್ಯವಸ್ಥೆ ಅವ್ಯವಸ್ಥೆಗೆ ಕಾರಣವಾಗಿತ್ತು. ವಿದುತ್ ದೀಪದ ವ್ಯವಸ್ಥೆ ಇಲ್ಲದೇ ವಿಹಾರಾರ್ಥಿಗಳು ಕತ್ತಲಾಗುವ ಮುಂಚೆ ಮನೆ ಸೇರಬೇಕಿತ್ತು. ಸಮಾನ್ಯವಾಗಿ ಇರುವ ವಾಕಿಂಗ್ ಟ್ರಾಕ್ ಹಾಗೂ ವಿಹಾರಕ್ಕಿರುವ ಬೆಂಚುಗಳಲ್ಲಿ ಹಿರಿಯನಾಗರೀಕರು, ವಿಹಾರಕ್ಕೆ ಬರುವವರು ಸುಮಾರು ೧೦ಗಂಟೆ ತನಕ ಭುಜಂಗ ಪಾರ್ಕ್ ನ ಉಪಯೋಗ ಪಡೆದುಕೊಳ್ಳುತ್ತಿದ್ದರು. ವಾಕಿಂಗ್ ಟ್ರ್ಯಾಕ್ ನಲ್ಲಿ ಅನೇಕರು ವ್ಯಾಯಾಮ ಮಾಡುತ್ತಿದ್ದರು. ಆದ್ರೆ ಇತ್ತೀಚಿಗೆ ಮಾತ್ರ ಭುಜಂಗ ಪಾರ್ಕ್ ಅನೈತಿಕ ಚಟುವಟಿಕೆಯ ತಾಣವಾಗಿ ಭುಜಂಗ ಪಾರ್ಕ್ ಒಳಗಿರುವ ಬಯಲು ರಂಗ ಮಂದಿರವನ್ನು ಅನ್ಯ ಕೆಲಸಕ್ಕೆ ಉಪಯೋಗಿಸಲಾಗುತ್ತಿತ್ತು. ಮಾತ್ರವಲ್ಲದೇ ಒಳಗಿರುವ ಕೋಣೆಯಲ್ಲಿ ಮದ್ಯಪಾನಿಗಳ ತಾಣವಾಗಿತ್ತು. ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಎಲ್ಲಾ ಅವ್ಯವಸ್ಥೆಯ ಬಗ್ಗೆ ವಿ4 ನ್ಯೂಸ್ ರಿಯಾಲಿಟಿ ಚೆಕ್ ಮಾಡಿದ್ದು ಅದರ ಬಗ್ಗೆ ಬೆಳಕು ಚೆಲ್ಲಿತ್ತು.

ವಿ4ನ್ಯುಸ್ ರಿಯಾಲಿಟಿ ಚೆಕ್ ನಡೆಸಿ ಪ್ರಸರ ಮಾಡಿದ್ದು ಅಧಿಕಾರಿಗಳನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನ್ಯುಸ್ ಪ್ರಸಾರವಾದ ಮೂರೇ ದಿನದಲ್ಲಿ ಅಧಿಕಾರಿಗಳು ವಿದ್ಯುತ್ ದೀಪದ ವ್ಯವ್ಸಸ್ಥೆ ಮಾಡಿದ್ದಾರೆ. ಇದು ವಿ೪ ನ್ಯೂಸ್‌ನ ಇಂಪ್ಯಾಕ್ಟ್ ಕೂಡಾ ಆಗಿದೆ. ಆದ್ರೆ ಇನ್ನೂ ಅನೇಕ ಪಾರ್ಕ್ ನಲ್ಲಿ ಅವ್ಯವಸ್ಥೆಗಳಿದ್ದು ಅಧಿಕಾರಿಗಳು, ಪೊಲೀಸರು ಇದರ ಬಗ್ಗೆ ಗ್ಮನ ಹರಿಸಬೇಕಾಗಿದೆ. ಮುಖ್ಯವಾಗಿ ಪಾರ್ಕ್‌ಗೆ ಆಗಮಿಸುವ ಯುವಕರು ಮದ್ಯಪಾನ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಪಾರ್ಕ್ ಗೆ ಕಾವಲುಗಾರನನ್ನು ನೇಮಿಸಬೇಕಾಗಿದ್ದು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಮಾತ್ರವಲ್ಲದೇ ಅಲ್ಲಲ್ಲಿ ವಿದ್ಯುತ್ ದೀಪಗಳು ಕೆಟ್ಟು ಹೋಗಿದ್ದು ಅದರ್ನ್ನು ಬದಲಾಯಿಸಬೇಕಾಗಿದೆ. ಇದರ ಬಗ್ಗೆನೂ ಅಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಬೇಕೆಂದು ನಾಗರೀಕ ಸಮಿತಿ ಆಗ್ರಹಿಸಿದೆ.

ಒಟ್ತಿನಲ್ಲಿ ವಿ4 ನ್ಯೂಸ್‌ನ ರಿಯಾಲಿಟಿ ಚೆಕ್ ಗೆ ಯಶಸ್ಸು ಸಿಕ್ಕಿದೆ. ವಿಹಾರಾರ್ಥಿಗಳಲ್ಲಿ ಸಂತಸ ಮೂಡಿಸಿದೆ. ಮಾತ್ರವಲ್ಲದೇ ಇದೀಗ ರಾತ್ರಿ ಹತ್ತು ಗಂಟೆ ತನಕವೂ ವಿಹಾರಾರ್ಥಿಗಳು ಪಾರ್ಕ್ ನ ಸದುಪಯೋಗ ಪಡೆಯುತ್ತಿದ್ದಾರೆ. ಇದು ವಿ4 ನ್ಯೂಸ್‌ನ ಬಿಗ್ ಇಂಪ್ಯಾಕ್ಟ್ ಸ್ಟೊರಿ ಆಗಿದೆ…

 

Related posts

Leave a Reply