Header Ads
Breaking News

ಭುಜಂಗ ಪಾರ್ಕ್ ಅಭಿವೃದ್ದಿ ಮಾಡಿದ್ದು ಬಿಜೆಪಿ. ಇದನ್ನ ಈಗ ಕಾಂಗ್ರೆಸ್ ಹಾಳುಗೆಡವಿದೆ ಎಂದ ಶಾಸಕರು.

ಭುಜಂಗ ಪಾರ್ಕ್ ನಲ್ಲಿ ವಿದ್ಯುತ್ ದೀಪದ ಅವ್ಯವಸ್ಥೆ ಬಗ್ಗೆ ವಿ4 ನ್ಯುಸ್ ರಿಯಾಲಿಟಿ ಚೆಕ್ ಮಾಡಿದ್ದು ಈ ಬಗ್ಗೆ ಉಡುಪಿ ಶಾಸಕ ರಘುಪತಿಭಟ್ ಪ್ರತಿಕ್ರಿಸಿದ್ದಾರೆ. ಈ ಹಿಂದೆ ಭುಜಂಗ ಪಾರ್ಕ್ ಅಭಿವೃದ್ಧಿ ಮಾಡಿದ್ದು ಬಿಜೆಪಿ ನೇತೃತ್ವದ ನಗರಸಭೆ ಆದ್ರೆ ಐದು ವರ್ಷದಲ್ಲಿ ಕಾಂಗ್ರೆಸ್ ಹಾಳುಗೆಡವಿದೆ ಎಂದರು.ಭುಜಂಗ ಪಾರ್ಕ್ ಅವ್ಯವಸ್ಥೆಯ ಆಗರವಾಗಿದೆ. ಅಂದ್ರು. ಇನ್ನು ಹಣದ ಆಸೆಗೆ ಯಾರಿಗೋ ದಾರಿ ದೀಪದ ನಿರ್ವಹಣೆ ಟೆಂಡರ್ ನೀಡಿ ಇಡೀ ದಾರಿ ದೀಪದ ವ್ಯವಸ್ಥೆಯನ್ನು ಅವ್ಯವ್‌ಅಸ್ಥೆ ಮಾಡಿದ್ದಾರೆ. ದಾರಿ ದೀಪ, ಸ್ವಚ್ಚತೆ, ರಸ್ತೆಗಳ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲವಾಗಿದೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ಪಾಠ ಕಳಿಸುತ್ತಾರೆ.ಅಂತ ಶಾಸಕ ರಘುಪತಿ ಭಟ್ ಹೇಳಿದರು. ಇನ್ನು ನಗರಸಭೆಯ ಚುನಾವಣೆಯ ಬಗ್ಗೆ ಮಾತನಾಡಿದ ಅವರು ಎಲ್ಲಾ ವಾರ್ಡ್ ಗಳಲ್ಲಿ ಸಭೆ ನಡೆಯುತ್ತಿದೆ.ಚುನಾವಣೆಯಲ್ಲಿ ಪ್ರಭಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ.ಈ ಬಾರಿ ಬಿಜೆಪಿಗೆ ಉತ್ತಮ ವಾತಾವರಣ ಇದೆ.ಜನ ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದಾರೆ.೧೦ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾದ್ಯತೆ.ಜಿಲ್ಲಾದ್ಯಕ್ಷರು ಈಗಾಗಲೇ ೧೪ ಜನರ ಸಮಿತಿ ರಚನೆ ಮಾಡಿದ್ದಾರೆ.ಇದರ ಅನ್ವಯ ಅಭ್ಯರ್ಥಿ ಆಯ್ಕೆ ಜೊತೆಗೆ ಸಮಾಜಿಕ ನ್ಯಾಯದಡಿಯೂ ಅಭ್ಯರ್ಥಿ ಆಯ್ಕೆ ನಡೆಯುತ್ತದೆ.ಎಲ್ಲಾ ಜಾತಿಯವರಿಗೂ ಪ್ರಾತಿನಿದ್ಯ ಸಿಗುವ ಹಾಗೆ ಮಾಡುತೇವೆ. ಅಂತ ತಿಳಿಸಿದರು.

Related posts

Leave a Reply